ಮಕ್ಕಳ ಆಸಕ್ತಿಗೆ ಪಾಲಕರು ಸಹಕಾರ ನೀಡಬೇಕು

ಮಕ್ಕಳ ಆಸಕ್ತಿಗೆ ಪಾಲಕರು ಸಹಕಾರ ನೀಡಬೇಕು

ದಾವಣಗೆರೆ, ಮಾ.11- ಮಕ್ಕಳ ಆಲೋಚನೆ ಹಾಗೂ ಅವರ ಆಸಕ್ತಿಯನ್ನು ಪಾಲಕರು ಗುರುತಿಸಿ, ಸಹಕಾರ ನೀಡಬೇಕು. ಆಗ ಮಕ್ಕಳ ಭವಿಷ್ಯ ಉಜ್ವಲ ವಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಪುಷ್ಪಲತಾ ಹೇಳಿದರು.

ನಗರದ ಸಂತ ಪೌಲರ ನರ್ಸರಿ ಶಾಲೆಯಲ್ಲಿ ಯುಕೆಜಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಗ್ರಾಜುಯೇಷನ್ ಡೇ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಮಾನಗಳಲ್ಲಿ ಪಾಲಕರು ತಮ್ಮ ಕೆಲಸಗಳಲ್ಲಿ ನಿರತರಾಗುತ್ತಿದ್ದ ರಿಂದ ಮಕ್ಕಳಿಗೆ ಸಮ ಯವನ್ನೇ ನೀಡುತ್ತಿಲ್ಲ. ಇದರಿಂದಾಗಿ ಮಕ್ಕಳಲ್ಲಿ ತಂದೆ-ತಾಯಿಯರ ಮಹತ್ವ ಹಾಗೂ ಕುಟುಂಬದ ಒಡನಾಟ ತಪ್ಪುತ್ತಿದೆ. ಹಾಗಾಗಿ ಮಕ್ಕಳೊಂದಿಗೆ ಸಮಯ ಮೀಸಲಿಡಬೇಕೆಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಸಂತ ಪೌಲರ ಸಂಸ್ಥೆಯ ಸ್ಥಳೀಯ ವ್ಯವಸ್ಥಾಪಕರಾದ ಮಾರ್ಜರಿ, ನರ್ಸರಿ ಶಾಲೆಯ ಮುಖ್ಯಶಿಕ್ಷಕಿ ಮೆಟ್ಟಿಲ್ಡ, ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಸುಪ್ರಿಯಾ, ಸಂಸ್ಥೆಯ ಸಿಬ್ಬಂದಿ ಇದ್ದರು.

error: Content is protected !!