ಜಿಗಳಿ: ಇಂದಿನಿಂದ ಶ್ರೀ ರಂಗನಾಥ ಸ್ವಾಮಿ ಜಾತ್ರೆ – ನಾಳೆ ತೇರು

ಜಿಗಳಿ: ಇಂದಿನಿಂದ ಶ್ರೀ ರಂಗನಾಥ ಸ್ವಾಮಿ ಜಾತ್ರೆ – ನಾಳೆ ತೇರು

ಮಲೇಬೆನ್ನೂರು ಸಮೀಪದ ಜಿಗಳಿ ಗ್ರಾಮದ ಆರಾಧ್ಯ ದೈವ ಶ್ರೀ ರಂಗನಾಥ ಸ್ವಾಮಿ ರಥೋತ್ಸವದ ಜಾತ್ರಾ ಮಹೋತ್ಸವವು ಇಂದಿನಿಂದ ಇದೇ ದಿನಾಂಕ 18ರವರೆಗೆ ಜರುಗಲಿದೆ.

ಇಂದು ಬೆಳಿಗ್ಗೆ 8 ಗಂಟೆಗೆ  ಗಜ ಉತ್ಸವ, ಸಂಜೆ 4 ಗಂಟೆಯಿಂದ ಶಸ್ತ್ರ್ರ ಕಾರ್ಯಕ್ರಮ, ಇದೇ ದಿನ ತಡರಾತ್ರಿ (ಗುರುವಾರ ಬೆಳಗಿನ ಜಾವ) ಶ್ರೀ ರಂಗನಾಥಸ್ವಾಮಿ ರಥೋತ್ಸವವು ಶ್ರೀ ಬೀರಲಿಂಗೇಶ್ವರ, ಯಲವಟ್ಟಿಯ ಶ್ರೀ ಆಂಜನೇಯ ಸ್ವಾಮಿ ಹಾಗೂ ಜಿ. ಬೇವಿನಹಳ್ಳಿಯ ಶ್ರೀ ಆಂಜನೇಯ ಸ್ವಾಮಿ ಜೊತೆಗೂಡಿ ಬ್ರಾಹ್ಮೀ ಮುಹೂರ್ತದಲ್ಲಿ ನಡೆಯಲಿದೆ.

ದಿನಾಂಕ 13ರ ಗುರುವಾರ ಬೆಳಿಗ್ಗೆ 10.30 ರಿಂದ ಜವಳ ಮುದ್ರೆ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ ಓಕಳಿ ನಂತರ ಕಂಕಣ ವಿಸರ್ಜನೆ ಮಾಡಲಾಗುವುದು ಎಂದು ಗ್ರಾಮದ ಗೌಡ್ರ ಬಸವರಾಜಪ್ಪ ತಿಳಿಸಿದ್ದಾರೆ.

error: Content is protected !!