ಮಹಿಳಾ ನಿಲಯಕ್ಕೆ ಪಡಿತರಕ್ಕೆ ಚೆಕ್ ವಿತರಣೆ

ಮಹಿಳಾ ನಿಲಯಕ್ಕೆ ಪಡಿತರಕ್ಕೆ ಚೆಕ್ ವಿತರಣೆ

ದಾವಣಗೆರೆ, ಮಾ. 11- ಫೋಟೋಗ್ರಾಫರ್ಸ್ ಯೂತ್ ವೆಲ್ ಫೇರ್ ಅಸೋಸಿಯೇಷನ್ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ವಿಶೇಷ ದತ್ತು ಸಂಸ್ಥೆ  ರಾಜ್ಯ ಮಹಿಳಾ ನಿಲಯ ಇವರಿಗೆ ಒಂದು ತಿಂಗಳ ಪಡಿತರಕ್ಕಾಗಿ 9,124 ರೂ.ಗಳ ಚೆಕ್ ನೀಡಲಾಯಿತು. 

ರಾಜ್ಯ ಮಹಿಳಾ ನಿಲಯದ ದಾವಣಗೆರೆ ವಿಭಾಗದ ಅಧೀಕ್ಷಕರಾದ ಶ್ರೀಮತಿ ಭಾರತಿ ಹಿಂಡೇರ ಅವರಿಗೆ ಚೆಕ್ ಹಸ್ತಾಂತರಿಸಲಾಯಿತು. 

ಈ ಸಂದರ್ಭದಲ್ಲಿ ಅಧ್ಯಕ್ಷ ಶ್ರೀನಾಥ್ ಪಿ ಅಗಡಿ, ಉಪಾಧ್ಯಕ್ಷ ತಿಪ್ಪೇಸ್ವಾಮಿ, ಕಾರ್ಯದರ್ಶಿ ದುಗ್ಗಪ್ಪ, ಜಿಲ್ಲಾ ಕಾರ್ಯದರ್ಶಿ ಹೆಚ್.ಕೆ. ಚನ್ನಬಸವರಾಜು,  ಸಹಕಾರ್ಯದರ್ಶಿ ಅರುಣ ಪಾಟೀಲ್, ಸಂಘಟನಾ ಕಾರ್ಯದರ್ಶಿ ಕಿರಣಕುಮಾರ್ ಉಪಸ್ಥಿತರಿದ್ದರು.

error: Content is protected !!