ದಾವಣಗೆರೆ, ಮಾ.2- ಜಪಾನ್ ದೇಶದ ಕಾಗೋಶಿಮಾ ವಿಶ್ವವಿದ್ಯಾಲಯದಲ್ಲಿ ಇದೇ ದಿನಾಂಕ 5ರಿಂದ 7ರ ವರೆಗೆ ನಡೆಯುವ ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ನಗರದ ಯು.ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಸಿ.ಎಂ. ರವಿಕುಮಾರ್ ತಮ್ಮ ಸಂಶೋಧನಾ ಪ್ರಬಂಧವನ್ನು ಮಂಡಿಸಲಿದ್ದಾರೆ.
`ಪ್ಯಾಟಿಗ್ ಬಿಹೇವಿಯರ್ ಆಫ್ ರೀನ್ ಫೋರ್ಸ್ ಆಂಡ್ ಅನ್ರಿನ್ ಫೋರ್ಸ್ ಜಿಜಿಬಿಎಸ್ ಬೇಸ್ಡ್ ಕಾಂಕ್ರೀಟ್ ಬೀಮ್ಸ್’ ಎಂಬ ವಿಷಯದ ಸಂಶೋಧನಾ ಪ್ರಬಂಧವನ್ನು ಮೌಖಿಕವಾಗಿ ಪ್ರಸ್ತುತ ಪಡಿಸಲಿದ್ದಾರೆ.
ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸುವ ಡಾ.ಸಿ.ಎಂ ರವಿಕುಮಾರ್ ಅವರಿಂದ ಬಿ.ಡಿ.ಟಿ ಇಂಜಿನಿಯರಿಂಗ್ ಕಾಲೇಜಿನ ಸಂಶೋಧನಾ ಶ್ರೇಷ್ಠತೆ ದ್ವಿಗುಣಗೊಂಡಿದೆ.