ಹರಿಹರ ತಾ. ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಇಂದು ಮತ್ತು ರಾಜ್ಯ ಮಟ್ಟದ 7ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸ ವವು ಇಂದು ಮತ್ತು ನಾಳೆ ನಡೆಯ ಲಿದೆ ಎಂದು ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ವೈ.ಡಿ. ಅಣ್ಣಪ್ಪ ಹಾಗೂ ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷ ಹಿರೇಮೇ ಗಳಗೆರೆ ಲಕ್ಕಳ್ಳಿ ಹನುಮಂತಪ್ಪ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಮಹಿಳಾ ಘಟಕದ ಅಧ್ಯಕ್ಷರಾದ ಹಲವಾಗಲು ಹೆಚ್.ಟಿ.ವನಜಾಕ್ಷಮ್ಮ, ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಮಾಜಿ ಅಧ್ಯಕ್ಷ ಶಿರಹಟ್ಟಿ ದಂಡೆಪ್ಪ, ಹಲವಾಗಲು ಹೆಚ್.ಟಿ. ಗಿರೀಶಪ್ಪ, ಕೆ. ಉಚ್ಚೆಂಗೆಪ್ಪ, ಕಾರ್ಯದರ್ಶಿ ಜಿಟ್ಟಿನಕಟ್ಟಿ ಹೆಚ್.ಕೆ.ಮಂಜುನಾಥ, ಉಪಾಧ್ಯಕ್ಷರಾದ ಮಂಡಕ್ಕಿ ಸುರೇಶ, ಖಜಾಂಚಿ ಬಾಲೇನಹಳ್ಳಿ ರೇವಣಸಿದ್ದಪ್ಪ, ಪುರಸಭೆ ಸದಸ್ಯ ದ್ಯಾಮಜ್ಜಿ ರೊಕ್ಕಪ್ಪ, ಯಡಿಹಳ್ಳಿ ರಾಮಪ್ಪ, ಮುಖಂಡರಾದ ನಿಟ್ಟೂರು ಸಣ್ಣಹಾಲಪ್ಪ, ಆಲದಹಳ್ಳಿ ಷಣ್ಮುಖಪ್ಪ, ಬಾಗಳಿ ಆನಂದಪ್ಪ, ತೆಲಗಿ ಅಂಜಿನಪ್ಪ, ಶಿವಪ್ಪ, ಯಡಿಹಳ್ಳಿ ಶೇಖರಪ್ಪ, ಟಿ. ಪದ್ಮಾವತಿ, ಮಂಜುಳಾ, ಶೋಭಾ, ಪಣಿಯಾಪುರ ಲಿಂಗರಾಜ್, ಬಾಲೇನಹಳ್ಳಿ ಕೆಂಚನಗೌಡ, ದ್ಯಾಮಜ್ಜಿ ಹನುಮಂತಪ್ಪ ಸೇರಿದಂತೆ ಇತರರು ಇದ್ದರು.