ದಾವಣಗೆರೆ, ಜ. 6- ನಗರದ ಪಿ.ಜೆ. ಬಡಾವಣೆಯಲ್ಲಿರುವ ಶ್ರೀ ಅಕ್ಕಮಹಾದೇವಿ ವಧು-ವರಾನ್ವೇಷಣಾ ಕೇಂದ್ರದ 25ನೇ ವರ್ಷದ ರಜತ ಮಹೋತ್ಸವದ ಅಂಗವಾಗಿ ವಧು-ವರಾನ್ವೇಷಣೆ ಸಮಾವೇಶವು ನಾಡಿದ್ದು ದಿನಾಂಕ 8ರ ಶನಿವಾರ ಶ್ರೀಮತಿ ಮೋತಿ ಚನ್ನಬಸಮ್ಮ ವೀರಪ್ಪ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ಅಕ್ಕಮಹಾದೇವಿ ಸಮಾಜದ ಅಧ್ಯಕ್ಷರಾದ ಶ್ರೀಮತಿ ಕೆ.ಕೆ. ಸುಶೀಲಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ನಿವೃತ್ತ ಪ್ರಸೂತಿ ತಜ್ಞರಾದ ಶ್ರೀಮತಿ ಡಾ. ಶಾಂತಾಭಟ್ ಉಪಸ್ಥಿತರಿರುವರು.
ಅಕ್ಕಮಹಾದೇವಿ ಸಮಾಜದ ಉಪಾಧ್ಯಕ್ಷರಾದ ಶ್ರೀಮತಿ ಜಯಮ್ಮ ನೀಲಗುಂದ, ಕಾರ್ಯದರ್ಶಿ ಸುವರ್ಣಮ್ಮ ದೊಗ್ಗಳ್ಳಿ, ವಧು-ವರ ಅನ್ವೇಷಣಾ ಕೇಂದ್ರದ ಅಧ್ಯಕ್ಷರಾದ ಶ್ರೀಮತಿ ಉಮಾ ವೀರಭದ್ರಪ್ಪ, ಕಾರ್ಯದರ್ಶಿ ಶ್ರೀಮತಿ ಶಾಂತಾ ಯಾವಗಲ್, ಸಹ ಕಾರ್ಯದರ್ಶಿ ಮಾಗಾನಹಳ್ಳಿ ರತ್ನಮ್ಮ ಮತ್ತು ಇತರರು ಉಪಸ್ಥಿತರಿರುವರು. ವಿವರಗಳಿಗಾಗಿ ಸಂಪರ್ಕಿಸಿ : 97401 06484, 97405 70332.