ಮಕ್ಕಳ ಚದುರಂಗ ಸ್ಪರ್ಧೆಯಲ್ಲಿ ಲಯನ್ಸ್ ಅಧ್ಯಕ್ಷ ಎಸ್.ಜಿ. ಉಳುವಯ್ಯ
ದಾವಣಗೆರೆ, ಫೆ.5- ಮಕ್ಕಳಲ್ಲಿ ಚಾಣಾಕ್ಷತೆ ಹಾಗೂ ತಾಳ್ಮೆಯ ಮನೋ ಭಾವ ಬೆಳೆಯಲು ಚದುರಂಗ ಆಟ ಸಹಕಾರಿ ಎಂದು ಲಯನ್ಸ್ ಅಧ್ಯಕ್ಷ ಎಸ್.ಜಿ. ಉಳುವಯ್ಯ ಹೇಳಿದರು. ಅಪ್ಪು ಚೆಸ್ ಅಸೋಸಿಯೇಷನ್ ವತಿ ಯಿಂದ ನಗರದ ಲಯನ್ಸ್ ಕ್ಲಬ್ನಲ್ಲಿ ಆಯೋಜಿಸಿದ್ದ 19 ವರ್ಷದೊಳಗಿನ ಮಕ್ಕಳ ಚದುರಂಗ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳಲ್ಲಿ ಕ್ರೀಡಾ ಮನೋಭಾವ ಬೆಳಸಲು ಪಾಲಕರು ಸಹಕಾರ ನೀಡಬೇಕು. ದಾವಣಗೆರೆ ಜಿಲ್ಲೆ ಚೆಸ್ ಸೇರಿದಂತೆ ಎಲ್ಲಾ ಕ್ರೀಡಾಕೂಟಗಳಲ್ಲೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಲಿ ಎಂದು ಮಕ್ಕಳಿಗೆ ಶುಭ ಹಾರೈಸಿದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಸಿ. ಅಜಯ್ ನಾರಾಯಣ್ ಮಾತನಾಡಿ, ದಾವಣಗೆರೆಯ ಮಕ್ಕಳು ವಿಶ್ವ ಚಾಂಪಿಯನ್ಶಿಪ್ನಲ್ಲಿ ಹೆಸರು ಮಾಡಬೇಕೆಂದು ವಿಶ್ವ ಚಾಂಪಿಯನ್ ಡಿ. ಗುಕೇಶ್ ಅವರನ್ನು ನೆನೆದರು.
ಏಳು ಸುತ್ತುಗಳಲ್ಲಿ ನಡೆದ ಪಂದ್ಯಾವಳಿಯಲ್ಲಿ ಶಿವಮೊಗ್ಗಾದ ವಿಲಾಸ ಆಂಡ್ರೆ (ಪ್ರಥಮ), ಉಡುಪಿಯ ನಿಶಾಂತ್ ಡಿಸೋಜ (ದ್ವಿತೀಯ), ಗದಗಿನ ವಿ.ಎಸ್. ನಂದನ್ ಕುಮಾರ್ (ತೃತೀಯ), ದಾವಣಗೆರೆಯ ಇಶಾನ್ ಎಸ್. ಬಂಗೇರಾ 4ನೇ ಸ್ಥಾನ ಮತ್ತು ಹಾಸನದ ಎಂ.ಹೆಚ್. ಆಕಾಶ್ 5ನೇ ಸ್ಥಾನ ಗಳಿಸಿದ್ದಾರೆ.
8 ವರ್ಷದೊಳಗಿನ ಪಂದ್ಯಾವಳಿ : ಶಿವಮೊಗ್ಗಾದ ಟಿ. ವೀಕ್ಷಿತ (ಪ್ರಥಮ), ಸಮರ್ಥ್ ಪೂಜಾರ್ (ದ್ವಿತೀಯ), ದಾವಣಗೆರೆಯ ಎಸ್.ಜೆ. ತರುಣ್ ತೃತೀಯ ಸ್ಥಾನ ಪಡೆದಿದ್ದಾರೆ.
10 ವರ್ಷದೊಳಗಿನ ಪಂದ್ಯಾವಳಿ : ದಾವಣಗೆರೆಯ ಕೆ.ಸಿ. ಸಮರ್ಥ್ (ಪ್ರಥಮ) ಸಾಗರದ ಸ್ಯಾಮ್ಸನ್ (ದ್ವಿತೀಯ) ದಾವಣ ಗೆರೆಯ ಮೊಮ್ಮದ್ ಆರ್ಯನ್ ತೃತೀಯ ಸ್ಥಾನ ಗಳಿಸಿದ್ದಾರೆ.
12 ವರ್ಷದೊಳಗಿನ ಪಂದ್ಯಾವಳಿ : ಶಿವಮೊಗ್ಗದ ಎಂ.ಎಸ್. ದರ್ಶನ್ (ಪ್ರಥಮ) ಎ.ಪಿ. ನಿಶಾಂತ್ (ದ್ವಿತೀಯ), ಭದ್ರಾವತಿಯ ಪ್ರಣವ್ ಪ್ರಭಾಕರ್ ತೃತೀಯ ಸ್ಥಾನ ಹೊಂದಿದ್ದಾರೆ.
14 ವರ್ಷದೊಳಗಿನ ಪಂದ್ಯಾವಳಿ : ಶಿವಮೊಗ್ಗದ ಬಿ.ಎಸ್. ಸುಹಾನ್ ಕುಮಾರ್ (ಪ್ರಥಮ), ಹಾವೇರಿಯ ಪಿ.ಎಂ. ಯಶವಂತ್ (ದ್ವಿತೀಯ) ಮತ್ತು ಅದ್ವಿಕ್ ಹೆಗಡೆ ತೃತಿಯ ಸ್ಥಾನ ತೆಗೆದುಕೊಂಡಿದ್ದಾರೆ.
16 ವರ್ಷದೊಳಗಿನ ಪಂದ್ಯಾವಳಿ : ಕಲಬುರ್ಗಿಯ ವಿಕಾಸ್ ಪತ್ತಾರ್ (ಪ್ರಥಮ), ಶಿವಮೊಗ್ಗಾದ ಹಣಗಾ ಪಾಟೀಲ್ (ದ್ವಿತೀಯ) ಅಭಿಷೇಕ್ ರಾಯಣ ತೃತೀಯ ಸ್ಥಾನ ಪಡೆದಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ 130ಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸಿದ್ದರು.
ಈ ವೇಳೆ ಲಯನ್ಸ್ ಕ್ಲಬ್ ಸಹ ಕಾರ್ಯದರ್ಶಿಗಳಾದ ಎಸ್. ನಾಗರಾಜ್, ಹೆಚ್,ಎಂ. ನಾಗರಾಜ್, ಟಿ. ಯುವರಾಜ್, ಅಂತ ರಾಷ್ಟ್ರೀಯ ತೀರ್ಪುಗಾರ ಪ್ರಾಣೇಶ್ ಯಾದವ್, ಆಯೋಜಕ ರಾದ ಮಾಂತೇಶ್, ಹಾಲೇಶ್ ನಾಯ್ಕ, ಮಲ್ಲಿಕಾರ್ಜುನ್, ಸತೀಶ್ ಇತರರಿದ್ದರು.