ಆವರಗೆರೆ : ಶ್ರೀ ಬಾಲ ಶನೇಶ್ವರಸ್ವಾಮಿ ಮಹಾಕ್ಷೇತ್ರದಲ್ಲಿ 3ನೇ ವಾರ್ಷಿಕೋತ್ಸವ

ಆವರಗೆರೆ : ಶ್ರೀ ಬಾಲ ಶನೇಶ್ವರಸ್ವಾಮಿ ಮಹಾಕ್ಷೇತ್ರದಲ್ಲಿ 3ನೇ ವಾರ್ಷಿಕೋತ್ಸವ

ದಾವಣಗೆರೆ, ಫೆ. 5 – ಆವರಗೆರೆಯ (ಶ್ರೀ ಮಹಾಲಕ್ಷ್ಮೀ ಲೇ ಔಟ್ ಪಕ್ಕ) ಎತ್ತಿನ ಸಂತೆ ಹಿಂಭಾಗ ದಲ್ಲಿ ಶ್ರೀ ಗುರು ಬಾಲ ಶನೇಶ್ವರ ಸ್ವಾಮಿ ಮಹಾಕ್ಷೇತ್ರದಲ್ಲಿ 3ನೇ ವರ್ಷದ ವಾರ್ಷಿಕೋತ್ಸವ ಕಾರ್ಯ ಕ್ರಮವನ್ನು  ನಾಡಿದ್ದು ದಿನಾಂಕ 7 ಮತ್ತು 8ರಂದು ಏರ್ಪಡಿಸಲಾಗಿದೆ.

ದಿನಾಂಕ 7ರ ಶುಕ್ರವಾರ ಬೆಳಿಗ್ಗೆ ಬೆಳಿಗ್ಗೆ 7 ಕ್ಕೆ ಶ್ರೀ ವೀರಭದ್ರೇಶ್ವರ ಸ್ವಾಮಿಯ ಗುಗ್ಗಳ ಮತ್ತು ಮೆರವಣಿಗೆ ನಡೆಯಲಿದೆ. ನಂತರ ಬೆಳಿಗ್ಗೆ 9-00 ಗಂಟೆಗೆ ಕೆಂಡದಾರ್ಚನೆ ಇರುತ್ತದೆ.

ದಿನಾಂಕ 8ರ ಶನಿವಾರ ಬೆಳಿಗ್ಗೆ 5 ಗಂಟೆಗೆ ಸ್ವಾಮಿಯ ಅಭಿಷೇಕ, ಬೆಳಿಗ್ಗೆ 10.30 ರಿಂದ ವೇದಿಕೆ ಸಮಾರಂಭ ಮತ್ತು ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ಇರುತ್ತದೆ. ನಂತರ ಸಂಜೆ 5 ಕ್ಕೆ ಶ್ರೀ ಗುರು ಬಾಲಶನೇಶ್ವರ ಸ್ವಾಮಿ ಯ ಉತ್ಸವ ಮೂರ್ತಿಯ ಮೆರವಣಿಗೆ ಜರಗುವುದು. ಉಜ್ಜಯಿನಿ ಪೀಠದ ಶ್ರೀ ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾ ದರು ಸಾನಿಧ್ಯ ವಹಿಸುವರು. ಕೋಣಂ ದೂರು ಮಠದ ಶ್ರೀ ಶ್ರೀಪತಿ ಪಂಡಿತಾ ರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸುವರು. ವಿಶೇಷ ಆಹ್ವಾನಿತರಾಗಿ ಕೆಎಸ್ಸಾ ರ್ಟಿಸಿ ವಿಭಾಗೀಯ ನಿಯಂತ್ರಣ ಅಧಿಕಾರಿ  ಸಿದ್ದೇಶ್ವರ ಎನ್. ಹೆಬ್ಬಾಳ ಆಗಮಿಸುವರು. ವಿವರಕ್ಕೆ ಸಂಪರ್ಕಿಸಿ : 9742374821, 8867345362.

error: Content is protected !!