ಗಡಿ ಭದ್ರತಾ ಪಡೆಯ ಬಲ್ಲೂರು ಬಸವರಾಜ ಮುದೇನೂರು ಅವರಿಗೆ ಆತ್ಮೀಯ ಸ್ವಾಗತ

ಗಡಿ ಭದ್ರತಾ ಪಡೆಯ ಬಲ್ಲೂರು ಬಸವರಾಜ ಮುದೇನೂರು ಅವರಿಗೆ ಆತ್ಮೀಯ ಸ್ವಾಗತ

ದಾವಣಗೆರೆ, ಫೆ. 4- 23 ವರ್ಷಗಳ ಕಾಲ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಯಾಗಿ ತಾಯ್ನಾಡಿಗೆ ಮರಳಿದ ದಾವಣಗೆರೆ ತಾಲ್ಲೂಕಿನ ಬಲ್ಲೂರು ಬಸವರಾಜ ಮುದೇನೂರು ಅವರನ್ನು ದಾವಣಗೆರೆ ಜಿಲ್ಲಾ ಪ್ಯಾರಾ ಮಿಲಿಟರಿ ಸಂಘ, ಜಿಲ್ಲಾ ರೈತರ ಒಕ್ಕೂಟದಿಂದ ಇಂದು ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರೈತಪರ ಹೋರಾ ಟಗಾರ ಕೊಳೇನಹಳ್ಳಿ ಬಿ.ಎಂ. ಸತೀಶ್ ಮಾತನಾಡಿ, ಬಸವರಾಜ ಮುದೇನೂರು, ದೇಶದ ಗಡಿ ಪ್ರದೇಶ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಮೇಘಾಲಯ, ಅಸ್ಸಾಂ ಸೇರಿದಂತೆ ದೇಶದ ವಿವಿಧ ಗಡಿ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಅವರ ಸೇವಾವಧಿಯಲ್ಲಿ ವಿಶಿಷ್ಟ ಮತ್ತು ಧೈರ್ಯ ಕಾರ್ಯಭಾರದ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದು ಶ್ಲ್ಯಾಘಿಸಿದರು.

ಮಾಜಿ ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ, ಬಸವರಾಜ ಮುದೇನೂರು ಅವರ ಕರ್ತವ್ಯ ನಿಷ್ಠೆ, ದೇಶಪ್ರೇಮ ಇಂದಿನ ಮಕ್ಕಳಿಗೆ ಪ್ರೇರಣೆಯಾಗಲಿ ಎಂದು ಹೇಳಿದರು.

ಜಿಲ್ಲಾ ಪ್ಯಾರಾ ಮಿಲಿಟರಿ ಸಂಘದ ಮುಖಂಡ ರಾದ ಕೆ.ಆರ್.ಮಂಜಾನಾಯ್ಕ್, ಸುರೇಶರಾವ್, ಚನ್ನಬಸವ ಗೌಡ್ರು, ರೈತ ಮುಖಂಡರಾದ ಬಲ್ಲೂರು ಬಸವರಾಜ, ಜಡಗನಳ್ಳಿ ಚಿಕ್ಕಪ್ಪ, ಕನಗೊಂಡನಹಳ್ಳಿ ಎಸ್.ನಿಂಗಪ್ಪ, ಬಿಜೆಪಿ ಮುಖಂಡರಾದ ರಾಜು ನೀಲಗುಂದ, ಟಿಂಕರ್ ಮಂಜಣ್ಣ, ಟಿಪ್ಪುಸುಲ್ತಾನ್ ಮುಂತಾದವರು ಉಪಸ್ಥಿತರಿದ್ದರು.

error: Content is protected !!