ಮಡಿವಾಳ ಮಾಚಿದೇವರ ಜಯಂತಿ ಆಚರಣೆ

ಮಡಿವಾಳ ಮಾಚಿದೇವರ ಜಯಂತಿ ಆಚರಣೆ

ಮಲೇಬೆನ್ನೂರು, ಫೆ. 4- ಶ್ರೇಷ್ಠ ಶರಣ ಮಡಿವಾಳ ಮಾಚಿದೇವರು ವೀರ ಸೇನಾನಿಯಾಗಿ ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ನಂದಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರೂ ಆದ ಪುರಸಭೆ ನಾಮಿನಿ ಸದಸ್ಯ ಬಿ. ವೀರಯ್ಯ ಹೇಳಿದರು.

ಇಲ್ಲಿನ ಪುರಸಭೆಯ ಕೌನ್ಸಿಲ್ ಸಭಾಂಗಣ ದಲ್ಲಿ ಹಮ್ಮಿಕೊಂಡಿದ್ದ ಶರಣ ಮಡಿವಾಳ ಮಾಚಿ ದೇವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  ಬಸವಣ್ಣ, ಚನ್ನಬಸವಣ್ಣ ಮತ್ತು ಇತರೆ ಶರಣರ ಜೊತೆ ಮಾಚಿದೇವರು ಅವಿನಾಭಾವ ಸಂಬಂಧ ಹೊಂದಿದ್ದರು. ಯಾವಾಗಲೂ ಖಡ್ಗವನ್ನು ಜೊತೆಯಲ್ಲಿಟ್ಟುಕೊಂಡೇ ಜೀವನ ನಡೆಸುತ್ತಿದ್ದರು. ಶೋಷಣೆ ಮಾಡುವವರ ಬಟ್ಟೆ ತೊಳೆಯಲು ನಿರಾಕರಿಸಿದ್ದರು. ಗುರು ಮಲ್ಲಿಕಾರ್ಜುನ ಅವರ ಮಾರ್ಗದರ್ಶನದಲ್ಲಿ 356ಕ್ಕೂ ಹೆಚ್ಚು ವಚನಗಳನ್ನು ರಚಿಸಿ, ಸಮಾಜದ ಡೊಂಕುಗಳನ್ನು ತಿದ್ದಿ, ಸಮ ಸಮಾಜ ನಿರ್ಮಿಸಲು ಶ್ರಮಿಸಿದ್ದರು ಎಂದರು.

ಪುರಸಭೆ ಸದಸ್ಯ ಸಾಬೀರ್ ಅಲಿ ಮಾತನಾಡಿ, ಕಾಯಕ ನಿಷ್ಠರಿಗೆ ಮಾತ್ರ ತನ್ನ ಸೇವೆ ಮಾಡುತ್ತಿದ್ದ ಮಾಚಿದೇವರು ಕಲ್ಯಾಣ ಕ್ರಾಂತಿಯಲ್ಲಿ ಶರಣರ ದಾರಿಯಲ್ಲಿ ನಡೆದು ಮಾದರಿಯಾದರು ಎಂದರು.

ಪುರಸಭಾ ಅಧ್ಯಕ್ಷ ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಮಡಿವಾಳ ಸಮಾಜದ ಮುಖಂಡ ಎಂ ಆರ್ ಮಹಾದೇವಪ್ಪ, ಪುರಸಭೆ ಸದಸ್ಯ ಗೌಡ್ರ ಮಂಜಣ್ಣ, ಪಿಎಸಿಎಸ್ ಅಧ್ಯಕ್ಷ ಕೆ ಪಿ  ಗಂಗಾಧರ್, ಮುಖ್ಯಾಧಿಕಾರಿ ಭಜಕ್ಕನವರ್ ಮಾತನಾಡಿದರು.

 ಪುರಸಭೆ ಸದಸ್ಯರಾದ ಭೋವಿ ಶಿವು, ಶಬ್ಬೀರ್ ಖಾನ್, ಎ. ಆರೀಫ್ ಅಲಿ, ಬಸವರಾಜ್ ದೊಡ್ಮನಿ, ಚಮನ್ ಷಾ, ಜಿಗಳೇರ ಹಾಲೇಶಪ್ಪ, ಯೂಸುಫ್ ಖಾನ್, ಬಿ. ಸುರೇಶ್, ಸುಬ್ಬಿ ರಾಜಣ್ಣ, ಪಿ ಆರ್ ರಾಜು, ಅಧಿಕಾರಿಗಳಾದ ದಿನಕರ್, ಉಮೇಶ್, ಶಿವರಾಜ್ ಕೂಸಗಟ್ಟಿ, ಮಡಿವಾಳ ಸಮಾಜದ ಬಸವರಾಜ್, ರಾಜೇಶ್, ಆಂಜನೇಯ, ಕೆಂಚಪ್ಪ ಭಾಗವಹಿಸಿದ್ದರು.

error: Content is protected !!