ಸ್ವಾವಲಂಬಿ ಬದುಕಿಗೆ ಉತ್ತಮ ಶಿಕ್ಷಣ ಅಗತ್ಯ : ಜಿ.ಬಿ.ವಿನಯ್

ಸ್ವಾವಲಂಬಿ ಬದುಕಿಗೆ ಉತ್ತಮ ಶಿಕ್ಷಣ ಅಗತ್ಯ : ಜಿ.ಬಿ.ವಿನಯ್

ಜಗಳೂರು, ಫೆ.3- ಇಂದಿನ ಪ್ರಪಂಚದಲ್ಲಿ ಜ್ಞಾನ, ಶಿಕ್ಷಣ, ತಂತ್ರಜ್ಞಾನ ಸೇರಿದಂತೆ ಎಲ್ಲವೂ ಲಭ್ಯವಿದೆ. ಬೇಕಾಗಿರುವುದು ಗಟ್ಟಿ ಮನಸ್ಸು ಮಾತ್ರ. ಒಳ್ಳೆಯ ಶಿಕ್ಷಣ ಪಡೆಯುವ ಮೂಲಕ ಸ್ವತಂತ್ರ ಮತ್ತು ಧೈರ್ಯದಿಂದ ಸ್ವಾವಲಂಬಿಗಳಾಗಿ ಬದುಕಬೇಕು ಎಂದು ಇನ್‌ಸೈಟ್ಸ್ ಸಂಸ್ಥೆ ಸಂಸ್ಥಾಪಕ ಜಿ.ಬಿ.ವಿನಯ್ ಕುಮಾರ್ ಸಲಹೆ ನೀಡಿದರು.

ಜಗಳೂರು ಪಟ್ಟಣದ ಮಹರ್ಷಿ ವಾಲ್ಮೀಕಿ ಸಮು ದಾಯ ಭವನದಲ್ಲಿ ಸಮಾನ ಮನಸ್ಕರ ಬಳಗದ ಆಶ್ರಯದಲ್ಲಿ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ, ರಾಷ್ಟ್ರೀಯ ಯುವಕರ ದಿನದ ಪ್ರಯುಕ್ತ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ನೀಡಲಾದ ಸನ್ಮಾನ ಸಮಾರಂಭದಲ್ಲಿ ಸನ್ಮಾನಿತರಾಗಿ  ಅವರು ಮಾತನಾಡಿದರು.

ಪ್ರತಿಯೊಬ್ಬರೂ ಪುಸ್ತಕಗಳನ್ನು ಓದುವ ಮೂಲಕ ಜ್ಞಾನ ಸಂಪಾದಿಸಿಕೊಳ್ಳಿ.  ಯಾರ ಮುಂದೆಯೂ ಕೈಚಾಚಬೇಡಿ.  ಸ್ವಾಭಿ ಮಾನಕ್ಕೆ ಬಡತನ ಇರಬಾ ರದು,  ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ದೊಡ್ಡ ಕನಸು ಕಾಣಬೇಕು ಎಂದು ಹೇಳಿದರು.

ಡಾ. ಬಿ. ಆರ್. ಅಂಬೇಡ್ಕರ್ ರವರ ಬರವಣಿಗೆಯಲ್ಲಿ ಸ್ವಾಭಿಮಾನ ಮತ್ತು ಘನತೆ ಪದಗಳು ಪದೇ ಪದೇ ಪುನರಾವರ್ತನೆ ಆಗಿವೆ. ಭಾರತ ದೇಶದ ಪ್ರತಿಯೊಬ್ಬ ವ್ಯಕ್ತಿಯ ಘನತೆ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ಬರಬಾರದು ಎಂಬುದೇ ಸಂವಿಧಾನದ ಮೂಲ ಉದ್ದೇಶ. ಇಂಥ ವ್ಯವಸ್ಥೆ ಸೃಷ್ಟಿಯಾಗಬೇಕು. ಅಸಮಾನತೆ ತೊಲಗಬೇಕು ಎಂದು ಪ್ರತಿಪಾದಿಸಿದರು.

ಸಮಾನ ಮನಸ್ಕರ ಬಳಗದ ಅಧ್ಯಕ್ಷ ಬಿಸ್ತುವಳ್ಳಿ ಬಾಬು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಡಾ. ಟಿ. ಜಿ. ರವಿಕುಮಾರ್, ಪ್ರದೀಪ್ ಕುಮಾರ್, ಶೌಖತ್ ಅಲಿ, ಕೀರ್ತಿ ದೇವೇಂದ್ರಪ್ಪ, ಮಹಾಲಿಂಗಪ್ಪ, ಬರ್ಕತ್ ಆಲಿ, ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!