ಅಕ್ಕಿ-ಬೇಳೆಗಳಿಂದ ಸಿದ್ಧಗಂಗಾ ಶ್ರೀಗಳ ಭಾವಚಿತ್ರ ರಚನೆ ಮೂಲಕ ಸಂಸ್ಮರಣೆ

ಅಕ್ಕಿ-ಬೇಳೆಗಳಿಂದ ಸಿದ್ಧಗಂಗಾ ಶ್ರೀಗಳ ಭಾವಚಿತ್ರ ರಚನೆ ಮೂಲಕ ಸಂಸ್ಮರಣೆ

ದಾವಣಗೆರೆ, ಫೆ. 3- ವಿನೋಬನಗರದ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಶಾಲೆಯಲ್ಲಿ ಸಿದ್ದಗಂಗಾ ಶ್ರೀಗಳ 5ನೇ ವರ್ಷದ ಪುಣ್ಯಸ್ಮರಣೆ ನಿಮಿತ್ತವಾಗಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್.ನಾಗರಾಜ ಸಮ್ಮುಖದಲ್ಲಿ, ಚಿತ್ರಕಲಾ ಶಿಕ್ಷಕ ಶಾಂತಯ್ಯ ಪರಡಿಮಠ ಮಾರ್ಗದರ್ಶನದಲ್ಲಿ, ಶಾಲೆಯ ವಿದ್ಯಾರ್ಥಿಗಳು 20×30 ಅಡಿಯ ಬೃಹತ್ ಭಾವಚಿತ್ರವನ್ನು ಅಕ್ಕಿ ಮತ್ತು ಬೆಳೆಗಳಿಂದ ರಚನೆ ಮಾಡುವುದರ ಮೂಲಕ ಶ್ರೀಗಳ ಸಂಸ್ಮರಣೆ ಮಾಡಲಾಯಿತು. 

ವಿಷಯ ಪರಿವೀಕ್ಷರಾದ ಶಶಿಕಲಾ , ಡಯಟ್ ಉಪನ್ಯಾಸಕಿ ಅನಿತ, ಮುಖ್ಯೋಪಾ ಧ್ಯಾಯಿನಿ ಸವಿತಾ ಉಪಸ್ಥಿತರಿದ್ದರು. ಶಿಕ್ಷಕರಾದ ಜ್ಯೋತಿ ಎಚ್.ಬಿ, ಜಿ.ಎಮ್. ಪ್ರಭುದೇವ, ಕೆ. ಹಾಲಪ್ಪ,  ಶ್ವೇತ ಎಚ್, ಲಿಂಗರಾಜ ಗಾಜಿ ಕಾರ್ಯಕ್ರಮಕ್ಕೆ ಸಹಕರಿಸಿದರು.

error: Content is protected !!