ನಗರ ದೇವತೆಗೆ ಹರಕೆ ತೀರಿಸಿದ ಎಸ್ಸೆಸ್ ಯುವ ಅಭಿಮಾನಿ ಬಳಗ

ನಗರ ದೇವತೆಗೆ ಹರಕೆ ತೀರಿಸಿದ  ಎಸ್ಸೆಸ್ ಯುವ ಅಭಿಮಾನಿ ಬಳಗ

ದಾವಣಗೆರೆ, ಜ.23- ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅನಾರೋಗ್ಯದಿಂದ ಗುಣಮುಖರಾಗಿ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ನಗರ ದೇವತೆ ದುರ್ಗಾಂಬಿಕಾ ದೇವಿಗೆ 101 ಕಾಯಿ ಒಡೆಯುವ ಮೂಲಕ ಎಸ್.ಎಸ್ ಯುವ ಅಭಿಮಾನಿ ಬಳಗ ಹರಕೆ ತೀರಿಸಿತು. ಈ ವೇಳೆ ಶ್ರೀ ದುರ್ಗಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು. ಶಾಸಕರ ಮೊಮ್ಮಗ ಸಮರ್ಥ್ ಶಾಮನೂರು, ಪಾಲಿಕೆ ಸದಸ್ಯ ಎಲ್‌.ಎಂ.ಹೆಚ್‌. ಸಾಗರ್‌, ಶಂಭು ಉರೇಕೊಂಡಿ, ಶಿವರತನ್‌, ರಂಗಸ್ವಾಮಿ, ಅಜಿತ್‌ ಆಲೂರು, ಶ್ರೀನಿವಾಸ್‌ ಕಲ್ಪತರು, ಮುಜಾಹಿದ್‌ ಪಾಷಾ, ಸುಭಾಷ್‌, ರಾಜು ಭಂಡಾರಿ ಇದ್ದರು.

error: Content is protected !!