ದಾವಣಗೆರೆ, ಜ. 23 – ನಗರದ ರಾಮ್ ಅಂಡ್ ಕೋ ಸರ್ಕಲ್‌ನಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128ನೇ ಜನ್ಮ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಕೆ. ಶೆಟ್ಟಿ ಮಾತನಾಡಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಆದರ್ಶಗಳು ಯುವಕರಿಗೆ ಮಾದರಿ ಅವರು ಮಹಾತ್ಮಾ ಗಾಂಧಿ ನೇತೃತ್ವದ ರಾಷ್ಟ್ರೀಯತಾವಾದಿ ಚಳುವಳಿ, ಜವಾಹರಲಾಲ್ ನೆಹರು ಅವರ ನಂತರ ಅವರು ಕಾಂಗ್ರೆಸ್‌ನೊಳಗಿನ ಒಂದು ಗುಂಪಿನಲ್ಲಿ ನಾಯಕತ್ವ ವಹಿಸಿಕೊಂಡಿದ್ದರು. ಬೋಸ್ 1938 ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು ಎಂದು ದಿನೇಶ್ ಶೆಟ್ಟಿ ತಿಳಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಎ. ನಾಗರಾಜ್, ಡಾ. ಆಲೂರ್ ಮಂಜುನಾಥ್, ಮಾಜಿ ಸದಸ್ಯ ಡಿ.ಎನ್. ಜಗದೀಶ್, ಕೇರಂ ಗಣೇಶ್, ಪ್ರಸನ್ನಕುಮಾರ್, ಹನುಮಂತಪ್ಪ, ಪರಶುರಾಮ್, ಚೇತನ್, ಗೋಪಾಲ್, ಪ್ರವೀಣ್, ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.