ಬುಡಕಟ್ಟು ಸಮುದಾಯದಲ್ಲಿ ಹೋರಾಟದ ಬದುಕು ಅಡಕ

ಬುಡಕಟ್ಟು ಸಮುದಾಯದಲ್ಲಿ ಹೋರಾಟದ ಬದುಕು ಅಡಕ

ಜಗಳೂರಿನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಮಲ್ಲಿಕಾರ್ಜುನ್ ಕಲಮರಹಳ್ಳಿ

ಜಗಳೂರು, ಜ.14- ಬುಡಕಟ್ಟು ಸಮುದಾಯಗಳಲ್ಲಿ ವಿಶಿಷ್ಟ ಸಂಸ್ಕೃತಿ, ಹೋರಾಟದ ಬದುಕು ಅಡಗಿರುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಹಾಗೂ ಸಾಹಿತಿ ಮಲ್ಲಿಕಾರ್ಜುನ್ ಕಲಮರಹಳ್ಳಿ ತಿಳಿಸಿದರು.

14ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಕಾರ್ಯಕ್ರಮದಲ್ಲಿ `ಬುಡಕಟ್ಟು ಸಮುದಾಯಗಳ ಸಂಸ್ಕೃತಿ’ ಎಂಬ ವಿಷಯ ಕುರಿತು ಗೋಷ್ಠಿಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ 60 ಬುಡಕಟ್ಟು ಸಮು ದಾಯಗಳನ್ನು ವಿದ್ವಾಂಸರು ಗುರುತಿಸಿದ್ದಾರೆ. ಅವರ ದೈವಗಳು ಅಮೂರ್ತ ಸ್ವರೂಪವಾಗಿದ್ದು, ಮನುಕುಲದಲ್ಲಿ ಜನಿಸಿ, ವಿಶಿಷ್ಟ ದೈವ ಸಿದ್ದಿಗಳನ್ನು ಗಳಿಸಿರುತ್ತಾರೆ ಎಂದರು. ಜನಪರವಾಗಿ ಹೋರಾಟ ನಡೆಸುತ್ತಾ, ಮಡಿದು ವೀರಗಾರರಾಗಿದ್ದಾರೆ. ಮೈಮೇಲೆ ದೇವರುಗಳು ಬಂದು ಕುರುಹು ನೀಡುತ್ತಾರೆ. ಇಂತಹ ವಿಶಿಷ್ಠ ಸಂಸ್ಕೃತಿಗಳು ನೆಲೆಸಿರುತ್ತವೆ ಎಂದು ಹೇಳಿದರು.

ದಾವಣಗೆರೆ ವಿಶ್ವವಿದ್ಯಾನಿಲಯದ ಸಿಂಡಿ ಕೇಟ್ ಸದಸ್ಯರಾದ ಡಾ.ಜಿ.ಕೆ ಪ್ರೇಮಾ ವಿಷಯ ಮಂಡಿಸಿ, ಬುಡಕಟ್ಟು ಸಮುದಾಯಗಳ ಕುರಿತು ಅಧ್ಯಯನ ಮಾಡಿದ ವಿದ್ವಾಂಸರುಗಳು ವಿರಳ. ಬುಡಕಟ್ಟು ಸಮುದಾಯಗಳ ಅಸ್ಮಿತೆಯನ್ನು ತೋರುವ ಅನಿವಾರ್ಯತೆಗಳಿವೆ ಎಂದರು.

ಬುಡಕಟ್ಟು ಸಮುದಾಯಗಳ ಸಾಮಾಜಿಕ ಸ್ಥಿತಿಗತಿ ಹಾಗೂ ಪರಂಪರೆಗಳನ್ನು ವರ್ತ ಮಾನಕ್ಕೆ ತುಲನೆ ಮಾಡಬೇಕಿದೆ.ಇತ್ತೀಚಿನ ಸಾಹಿತ್ಯ ಸಮ್ಮೇಳನಗಳಲ್ಲಿ ಬುಡಕಟ್ಟು ಸಮುದಾಯಗಳ ಧ್ವನಿಯಾಗುತ್ತಿರುವುದು ಶ್ಲ್ಯಾಘನೀಯ ಎಂದು ಹೇಳಿದರು.

ಸಾಮಾಜಿಕ ಭದ್ರತೆಯಿಲ್ಲದೇ, ಕೃಷಿ, ಹೈನು ಗಾರಿಕೆ ಮತ್ತು ಕುರಿಗಾಹಿಯನ್ನು ಅವಲಂಬಿಸಿ ರುವ ಬುಡಕಟ್ಟು ಸಮುದಾಯಗಳ 9 ಸಾವಿರ ಎಕರೆಗೂ ಅಧಿಕ ಭೂಮಿಯನ್ನು ವಶಪಡಿಸಿಕೊಂ ಡಿದ್ದಾರೆ‌. ಸರ್ಕಾರಗಳು ಅಭಿವೃದ್ಧಿ ನೆಪದಲ್ಲಿ ಅವರ ಬದುಕನ್ನು ಅತಂತ್ರಗೊಳಿಸಿದೆ ಎಂದು ಹೇಳಿದರು.

ಸಾಹಿತಿ ಹನಗವಾಡಿ ರುದ್ರಪ್ಪ ಮಾತನಾಡಿ, ರಾಜಕಾರಣ ವ್ಯವಸ್ಥೆ ಕಲುಷಿತಗೊಂಡಿದೆ. ರೈತ, ಬುಡಕಟ್ಟು ಸಮುದಾಯಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ. ಅಸೂಕ್ಷ್ಮ ಜನರ ಮಧ್ಯೆದಲ್ಲಿ ಬುಡಕಟ್ಟು ಸಂಸ್ಕೃತಿ ಅಲಕ್ಷಿತಗೊಂಡಿದೆ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಪರ ಇಚ್ಛಾಶಕ್ತಿಯ ರಾಜಕಾರಣದ ಅನಿವಾರ್ಯತೆಯಿದೆ ಎಂದರು.

ಈ ವೇಳೆ ಸಮ್ಮೇಳನದ ಸರ್ವಾಧ್ಯಕ್ಷ ಎ.ಬಿ. ರಾಮಚಂದ್ರಪ್ಪ, ಆರ್‌. ಮೋತಿ ಪರಮೇಶ್ವರ್ ರಾವ್, ಅನಮೋಲ್ ವಿದ್ಯಾಸಂಸ್ಥೆ ಸಿ.ಜಿ. ದಿನೇಶ್, ಸಾಹಿತಿ ಎನ್.ಎಂ ರವಿಕುಮಾರ್, ವಕೀಲ ಡಿ. ಶ್ರೀನಿವಾಸ್ ಉಪಸ್ಥಿತದ್ದರು. ಡಿಎಸ್ಎಸ್ ಸಂಚಾ ಲಕ ಸತೀಶ್ ಮಲೆಮಾಚಿಕೆರೆ ನಿರೂಪಿಸಿದರು.

error: Content is protected !!