ಶ್ರೀ ದುರ್ಗಮ್ಮ, ಶ್ರೀ ಮರಿಯಮ್ಮ ದೇವಿಯವರಿಗೆ ಬೆಳ್ಳಿ ಪ್ರಭಾವಳಿ

ಶ್ರೀ ದುರ್ಗಮ್ಮ, ಶ್ರೀ ಮರಿಯಮ್ಮ ದೇವಿಯವರಿಗೆ ಬೆಳ್ಳಿ ಪ್ರಭಾವಳಿ

ಹೊನ್ನಾಳಿ, ಜ. 13 –  ಆದಿ ದೇವತೆಗಳಾದ  ಶ್ರೀ ದುರ್ಗಮ್ಮ-ಶ್ರೀ ಮರಿಯಮ್ಮ ದೇವಿಯರ ಮುಖಗಳಿಗೆ ಭಕ್ತರ ಸಹಕಾರದೊಂದಿಗೆ 5 ಕೆ.ಜಿ ನೂತನ ಬೆಳ್ಳಿ ಕವಚ ಹಾಕಿ, ಹೊಸ ಬಟ್ಟೆ ಧರಿಸಿ, ವಿವಿಧ ಹೂಗಳಿಂದ ಅಲಂಕರಿಸಿ, ಅರ್ಚಕರು ವಿಶೇಷ ಪೂಜೆ ಮಾಡಲಿದ್ದಾರೆ.

ಜನವರಿ 13ರ ಸೋಮವಾರ ದಿನ ಬನದ ಹುಣ್ಣಿಮೆ, ಮಂಗಳವಾರ ಮಕರ ಸಂಕ್ರಾಂತಿ ಹಬ್ಬದ ದಿನವೇ ಶ್ರೀ ದುರ್ಗಮ್ಮ-ಶ್ರೀ ಮರಿಯಮ್ಮ ದೇವಿಯರ ಹಬ್ಬ ಬಂದಿರುವುದು ವಿಶೇಷವಾಗಿದೆ. ಈ ವರ್ಷ ಭಕ್ತರ ಸಹಕಾರದೊಂದಿಗೆ  ಶ್ರೀ ದುರ್ಗಮ್ಮ-ಶ್ರೀ ಮರಿಯಮ್ಮ ದೇವಿಯರ ಮುಖಗಳಿಗೆ 5 ಕೆ.ಜಿ. ಬೆಳ್ಳಿ ಪ್ರಭಾವಳಿಯನ್ನು ದೇವಿಯವರಿಗೆ ಹಾಕಿ ವಿಶೇಷವಾಗಿ ಪೂಜಿಸಲಾಗಿದೆ.

error: Content is protected !!