ಪಲ್ಲಾಗಟ್ಟಿ : ಅಯ್ಯಪ್ಪ ಸ್ವಾಮಿ ಪಡಿಪೂಜೆೆ

ಪಲ್ಲಾಗಟ್ಟಿ : ಅಯ್ಯಪ್ಪ ಸ್ವಾಮಿ ಪಡಿಪೂಜೆೆ

ಜಗಳೂರು,ಜ, 13- ತಾಲ್ಲೂಕಿನ ಪಲ್ಲಾಗಟ್ಟೆ ಗ್ರಾಮದ ಎಲ್ಐಸಿ ರಂಗಮಂದಿರದಲ್ಲಿ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ವತಿಯಿಂದ 25ನೇ ವರ್ಷದ ಶಬರಿಮಲೈ ಯಾತ್ರೆ ಪ್ರಯುಕ್ತ ಅಯ್ಯಪ್ಪ ಸ್ವಾಮಿಯ ಪಡಿ ಪೂಜೆ ಹಾಗೂ ಬೆಳ್ಳಿ ರಥದಲ್ಲಿ ವಿಜೃಂಭಣೆಯ ಮೆರವಣಿಗೆ ಮಾಡಲಾಯಿತು.

ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ವಿಶೇಷವಾಗಿ ಏರ್ಪಡಿಸಲಾಗಿತ್ತು. ದಾವಣಗೆರೆ ತಂಡದವರಿಂದ  ವಿಶೇಷ ಹೂವಿನ ಅಲಂಕಾರದಿಂದ ಏರ್ಪಾಡಾಗಿದ್ದ ಪಡಿ ಪೂಜೆಯನ್ನು ದಾವಣಗೆರೆಯ ಗುರುಸ್ವಾಮಿಯಾದ ವರದರಾಜ ಸ್ವಾಮಿ ಹಾಗೂ  ತಂಡದವರಿಂದ ವಿಶೇಷವಾಗಿ ಮಾಡಲಾಯಿತು. 2000 ಇಸವಿಯಲ್ಲಿ ಪಲಾಗಟ್ಟೆ ಗ್ರಾಮದಲ್ಲಿ ಪ್ರಾರಂಭವಾದ ಅಯ್ಯಪ್ಪ ಸ್ವಾಮಿ ಶಬರಿಮಲೈ ಯಾತ್ರೆ ಕೈಗೊಂಡಿದ್ದವರನ್ನು ಹಾಗೂ ಸತತವಾಗಿ 18 ವರ್ಷಗಳ ಮೇಲ್ಪಟ್ಟು ಶಬರಿಮಲೈ ಯಾತ್ರೆ ಕೈಗೊಂಡಿದ್ದವರನ್ನು ಸನ್ಮಾನಿಸಲಾಯಿತು.

error: Content is protected !!