ದೇಶದ ಸಂಸ್ಕೃತಿ, ಪರಂಪರೆ ಹಾಗೂ ವೈಭವ ಅನಾವರಣ ಮಾಡಿದ ಚೇತನ ಶಾಲಾ ಮಕ್ಕಳು

ದೇಶದ ಸಂಸ್ಕೃತಿ, ಪರಂಪರೆ ಹಾಗೂ ವೈಭವ ಅನಾವರಣ ಮಾಡಿದ ಚೇತನ ಶಾಲಾ ಮಕ್ಕಳು

ದಾವಣಗೆರೆ, ಜ. 14- ಕನ್ನಡಿಯ ಮುಂದೆ ನಿಂತ ಯುವತಿ ; ಮೈಕಿನ ಮುಂದೆ ನಿಂತ ಸಾಹಿತಿಗೆ ಇಲ್ಲ ಕಾಲದ ಮಿತಿ  ಎಂದು ಹರಿಹರ ಎಸ್‌ಜೆವಿಪಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಹೆಚ್.ಎ. ಭಿಕ್ಷಾವರ್ತಿಮಠ್ ತಿಳಿಸಿದರು.

ಅವರು ನಗರದ ವಿಶ್ವಚೇತನ ವಿದ್ಯಾನಿಕೇತನ ವಸತಿಯುತ ಪ್ರೌಢ ಶಾಲೆಯಲ್ಲಿ    ಶಾಲಾ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡುತ್ತಿದ್ದರು.

ಹೆಣ್ಣು ಮಕ್ಕಳು ಉತ್ತಮ ಹಠವನ್ನು ಹೊಂದಿದ್ದರೆ ಏನನ್ನಾದರೂ ಸಾಧಿಸಬಹುದು.  ತಮ್ಮಲ್ಲಿದ್ದ ಛಲ ಈ ಸಂಸ್ಥೆಯನ್ನು ಕಟ್ಟುವಂತೆ ಮಾಡಿತು ಎಂದು  ಚೇತನ ವಿದ್ಯಾಸಂಸ್ಥೆಯ ಸಂಸ್ಥಾಪಕಿ  ಶ್ರೀಮತಿ ವಿಜಯಲಕ್ಷ್ಮಿ ಅವರ ಪರಿಶ್ರಮವನ್ನು ಶ್ಲ್ಯಾಘಿಸಿದರು. 

ಮಕ್ಕಳು ಸುಶಿಕ್ಷಿತರಾಗಲು ಸಂಸ್ಥೆ ಮತ್ತು ಶಿಕ್ಷಕರ ಪರಿಶ್ರಮ ಅತ್ಯಗತ್ಯ. ಅಂತಹ ಪರಿಶ್ರಮಿ ಉತ್ತಮ ಶಿಕ್ಷಕರನ್ನು ಮಕ್ಕಳು ಎಂದಿಗೂ ಮರೆಯುವುದಿಲ್ಲ. ಬಾಲ್ಯದಿಂದಲೂ ಮಕ್ಕಳಿಗೆ ಉತ್ತಮ ವಾತಾವರಣದೊಂದಿಗೆ ಉತ್ತಮ ಸಂಸ್ಕಾರ ನೀಡಬೇಕು. ಇತ್ತೀಚೆಗೆ ವಿದ್ಯಾ ವಂತ ಯುವಕ ಯುವತಿಯರು, ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗುತ್ತಿ ದ್ದಾರೆ. ಇದಕ್ಕೆ ಅವರಲ್ಲಿನ ಸಂಸ್ಕಾರ ದ ಕೊರತೆ ಕಾರಣ. ನಮ್ಮ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಬೆಳೆಸುವತ್ತ ನಾವೆ ಲ್ಲರೂ ಜಾಗೃತರಾಗೋಣ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಜಿ. ಕೊಟ್ರೇಶ್ ಮಾತನಾಡಿ,  ಪೋಷಕರು ಮಕ್ಕಳು ಶಾಲೆಯಲ್ಲಿ ಏನು ಕಲಿಯುತ್ತಿರುವರು ಎನ್ನುವತ್ತ ಗಮನಿಸಿ, ತಪ್ಪು ದಾರಿಯಲ್ಲಿ ಸಾಗದಂತೆ ಎಚ್ಚರ ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಶಾಲೆಯ  ನಿರ್ದೇಶಕ ರಾಘವೇಂದ್ರ ಪ್ರಸಾದ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಸತ್ಯ, ಧರ್ಮ, ಪ್ರಾಮಾಣಿಕತೆ ಮಕ್ಕಳಲ್ಲಿ ಇರಬೇಕು. ಅಂಕಗಳನ್ನು ಪರಿಗಣಿಸದೇ ಅವರಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಲು ಮುಂದಾಗೋಣ ಎಂದರು. 

ಪ್ರಾಂಶುಪಾಲ ಕಿರಣ್ ಕುಮಾರ್ ಎಂ. ಅವರು ವಾರ್ಷಿಕ ವರದಿ ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ  ವಾರ್ಷಿಕ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಗಳಿಸಲು ಮಾರ್ಗದರ್ಶನ ನೀಡಿದ ಕನ್ನಡ ಶಿಕ್ಷಕ ಬಿ. ನಾಗರಾಜ್, ಯರ್ರಿಸ್ವಾಮಿ ಜಿ., ಜಿ. ಸಿದ್ದಪ್ಪ ಹಾಗೂ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಶಾಲಾ ಸಿಬ್ಬಂದಿ ವರ್ಗದ ರಾಮಕೃಷ್ಣ, ಶಿವಕುಮಾರ್, ಕರಿಬಸವಯ್ಯ, ಪ್ರಭು, ರಮೇಶ್, ಡಿ ದರ್ಜೆಯ ಸಹಾಯಕರಾದ ರಮೇಶ್, ನಾಗೇಂದ್ರಪ್ಪ ಅವರಿಗೆ ಶಾಲಾ ವತಿಯಿಂದ  ಗೌರವಿಸಲಾಯಿತು.

ಪ್ರಾಂಶುಪಾಲ ವಿನೋದ್, ಪ್ರದೀಪ್, ಪ್ರಕಾಶ್ ಜೋಗಿ, ಮುಖ್ಯೋ ಪಾಧ್ಯಾಯ ಬಿ.ಎಂ.ಬಸವರಾಜಯ್ಯ, ಉಪ ಪ್ರಾಂಶುಪಾಲರಾದ  ಯುವರಾಜ್ ಕೆ. ಶ್ರೀಮತಿ ಶಾಜಿಯಾ ಬಾನು, ಶ್ರೀಮತಿ ಅಪೇಕ್ಷ ಅವರು ಉಪಸ್ಥಿತರಿದ್ದರು.

ಶಾಜಿಯಾ ಬಾನು ಸ್ವಾಗತಿಸಿದರು. ಕನ್ನಡ ಭಾಷಾ ಶಿಕ್ಷಕ ಸಿದ್ದಪ್ಪ ಜಿ. ವಂದಿ ಸಿದರು. ಬಿ. ನಾಗರಾಜ್, ವಿನಾಯಕ ಖಮಿತ್ಕರ್, ಅನುಷಾ, ಪ್ರೇರಣಾ, ಕೀರ್ತನ, ಯಶ್ಚಿಕ, ಸೈಯ್ಯದ್, ಅಬು ಸನ್ನಾನ್, ರಮ್ಯಾ, ಖುಷಿ, ಹರ್ಷಿಣಿ, ಪ್ರತ್ಯೂಶ್ ನಿರೂಪಿಸಿದರು.

error: Content is protected !!