ಸರ್ಕಾರಿ ಬ್ಲಡ್‌ ಬ್ಯಾಂಕ್ ತೆರೆಯಲು ಒತ್ತಾಯ

ಸರ್ಕಾರಿ ಬ್ಲಡ್‌ ಬ್ಯಾಂಕ್ ತೆರೆಯಲು ಒತ್ತಾಯ

ಕೊಟ್ಟೂರು, ಜ.8- ಪಟ್ಟಣದಲ್ಲಿ ಸರ್ಕಾರಿ ಬ್ಲಡ್ ಬ್ಯಾಂಕ್ ಸ್ಥಾಪನೆ ಹಾಗೂ ಇಲ್ಲಿನ ಕ್ರೀಡಾಂಗಣ ಅಭಿವೃದ್ಧಿ ಮಾಡಬೇಕೆಂದು ಆಗ್ರಹಿಸಿ, ಹಳೇ ಕೊಟ್ಟೂರು ಸೇವಾ ಟ್ರಸ್ಟ್ ಸೋಮವಾರ ತಹಶೀಲ್ದಾರ್‌ ಮುಖೇನ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ

ಈ ವೇಳೆ ಮಾತನಾಡಿದ ಮುಖಂಡರು, ಪಟ್ಟಣದಲ್ಲಿ ಈಚೆಗೆ ರಕ್ತದ ಅಭಾವ ಹೆಚ್ಚಾಗಿದೆ. ರಕ್ತದ ಅವಶ್ಯ ಇರುವ ರೋಗಿಗೆ ನೆತ್ತರು ಪಡೆ ಯಲು ದೂರದ ದಾವಣಗೆರೆ ಹಾಗೂ ಹೊಸಪೇಟೆ ನಗರಕ್ಕೆ ಹೋಗಬೇಕಾಗಿದೆ ಆದ್ದರಿಂದ ಸಾಮಾಜಿಕ ಕಳಕಳಿ ದೃಷ್ಟಿಯಿಂದ ಪಟ್ಟಣದಲ್ಲಿ ಸರ್ಕಾರಿ ಬ್ಲಡ್ ಬ್ಯಾಂಕ್ ತೆರೆಯಬೇಕು ಎಂದು ಒತ್ತಾಯಿಸಿದ್ದಾರೆ.

ಗರ್ಭಿಣಿಯರು ಹಾಗೂ ಅಪಘಾತಕ್ಕೆ ತುತ್ತಾದ ವ್ಯಕ್ತಿಗಳಿಗೆ ತ್ವರಿತ ಗತಿಯಲ್ಲಿ ರಕ್ತ ಸಿಗದೇ ಇರುವುದರಿಂದ ಪಟ್ಟಣದ ವಾಸಿಗಳು ಹಾಗೂ ಗ್ರಾಮೀಣ ಪ್ರದೇಶದ ಜನರು ಕೆಲವೊಮ್ಮೆ ತೀವ್ರತರದ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಮನವರಿಕೆ ಮಾಡಿದರು.

ಪಟ್ಟಣದ ತಾಲ್ಲೂಕು ಕ್ರೀಡಾಂಗಣ ಅಭಿವೃದ್ಧಿ ಸ್ಪರ್ಷದಿಂದ ದೂರ ಸರಿದಿದೆ. 

ಸ್ವಾಸ್ಥ್ಯ ಹಾಗೂ ಕ್ರೀಡೆಯಲ್ಲಿ ಯುವಕರು ಸಾಧನೆಗೈಯ್ಯಲು ಇಲ್ಲಿನ ಅನಭಿವೃದ್ಧಿ, ಕಾಲೆಳೆಯುವ ಕಾರ್ಯ ಮಾಡುತ್ತಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕ್ರೀಡಾಂಗಣ ಅಭಿವೃದ್ಧಿ ಪಡಿಸಬೇಕೆಂದು ಆಗ್ರಹಿಸಿದ್ದಾರೆ.

ಈ ವೇಳೆ ಟ್ರಸ್ಟಿನ ಸಂಸ್ಥಾಪಕ ಹೆಚ್. ವಿಜಯ ಕುಮಾರ್, ಉಪಾಧ್ಯಕ್ಷ ಕೆ. ಸುವೇಭ್ ವಲಿ, ಪ್ರಧಾನ ಕಾರ್ಯದರ್ಶಿ ಕೆ. ಕೊಟ್ರೇಶ್, ಕಾರ್ಯ ಕಾರಿಣಿ ಸದಸ್ಯ ಪರಶುರಾಮ ಸುಲಾಖೆ, ಸುಬಾನ್, ಅನಿಲ್, ತೆಗ್ಗಿನಕೇರಿ ಕೊಟ್ರೇಶ್, ತಾಲ್ಲೂಕು ಅಧ್ಯಕ್ಷ ಮಹಮ್ಮದ್ ಗೌಸ್, ತಾಲ್ಲೂಕು ಉಪಾಧ್ಯಕ್ಷ ಕೆ. ರಾಜು, ರಾಕೇಶ್,  ಮುಬಾರಕ್, ಪಿ. ಗಣೇಶ್, ವಿರೂಪಾಕ್ಷ, ರಾಜು, ಮುಬಾರಕ್ ಇತರರಿದ್ದರು.

error: Content is protected !!