ದಾವಣಗೆರೆ ಪೊಲೀಸ್‌ ತಂಡಕ್ಕೆ ಆರ್‌ಪಿಎಲ್‌ ಕಪ್‌

ದಾವಣಗೆರೆ ಪೊಲೀಸ್‌ ತಂಡಕ್ಕೆ ಆರ್‌ಪಿಎಲ್‌ ಕಪ್‌

ದಾವಣಗೆರೆ, ಜ.1- ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿ ಭಾನುವಾರ ನಡೆದ `ರೇಂಜ್‌ ಪ್ರೀಮಿಯರ್‌ ಲೀಗ್‌’ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ತಂಡವು `ಆರ್‌ಪಿಎಲ್‌’ ಕಪ್ ತನ್ನದಾಗಿಸಿಕೊಂಡಿತು.

ಪೂರ್ವ ವಲಯದ ಜಿಲ್ಲೆಗಳಾದ ದಾವಣಗೆರೆ, ಶಿವಮೊಗ್ಗ, ಹಾವೇರಿ ಹಾಗೂ ಚಿತ್ರದುರ್ಗ ಜಿಲ್ಲೆಯ ತಂಡಗಳ ನಡುವೆ ಆರ್‌ಪಿಎಲ್‌ ಲೀಗ್‌ ಪಂದ್ಯಾವಳಿ ನಡೆದಿದ್ದು, `ದಾವಣಗೆರೆ’ ಮತ್ತು `ಹಾವೇರಿ’ ತಂಡಗಳು  ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದವು.

ರೋಚಕ ಫೈನಲ್‌ ಪಂದ್ಯಾವಳಿಯಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ದಾವಣಗೆರೆ ತಂಡ  6 ಓವರ್‌ಗಳಲ್ಲಿ 86 ರನ್‌ ಗಳಿಸುವ ಮೂಲಕ ಹಾವೇರಿ ತಂಡಕ್ಕೆ 87 ರನ್‌ಗಳ ಟಾರ್ಗೆಟ್‌ ನೀಡಿತು. ಫೈನಲ್ ಪಂದ್ಯದಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ತಂಡದ ನೂರ್‌ ಅಹ್ಮದ್ 1 ಓವರ್ ನಲ್ಲಿ 5 ಸಿಕ್ಸ್‌ ಭಾರಿಸುವ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟರು.

ದಾವಣಗೆರೆ ತಂಡದ ಟಾರ್ಗೆಟ್‌ ಬೆನ್ನತ್ತಿದ ಹಾವೇರಿ ತಂಡವು 6 ಓವರ್‌ ಗಳಲ್ಲಿ ಆಲ್‌ ಔಟ್‌ ಆಗಿ 42 ರನ್‌ ಗಳಿಸಿತು. ಹಾವೇರಿ ತಂಡ ಸೋಲಿಗೆ ಶರಣಾಗಿದ್ದರಿಂದ ದಾವಣಗೆರೆ ಜಿಲ್ಲಾ ಪೊಲೀಸ್‌ ತಂಡಕ್ಕೆ `ಆರ್‌ಪಿಎಲ್‌ ಕಪ್‌’ಒಲಿದು ಬಂದಿತು.

ಎಸ್ಪಿ ಉಮಾ ಪ್ರಶಾಂತ್‌ ಆರ್‌ಪಿಎಲ್‌ ಕ್ರಿಕೆಟ್ ಪಂದ್ಯಾವಳಿಗೆ ವಿಧ್ಯುಕ್ತ ಚಾಲನೆ ನೀಡಿದರು. ಇದೇ ವೇಳೆ ಪೂರ್ವ ವಲಯದ ನಾಲ್ಕೂ ಜಿಲ್ಲೆಗಳಿಂದ ರಾಜ್ಯ ಮಟ್ಟದ ಪಂದ್ಯಾವಳಿಗೆ ಪೂರ್ವ ವಲಯದಿಂದ ಕ್ರಿಕೆಟ್‌ ತಂಡವನ್ನು ಆಯ್ಕೆ ಮಾಡಲಾಯಿತು. 

ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ. ಸಂತೋಷ್, ಜಿ. ಮಂಜುನಾಥ, ಚನ್ನಗಿರಿ ಉಪ ವಿಭಾಗದ ಎಎಸ್ಪಿ ಸ್ಯಾಮ್ ವರ್ಗೀಸ್, ಡಿವೈಎಸ್ಪಿ ಬಸವರಾಜ್ ಬಿ.ಎಸ್‌, ಮಲ್ಲೇಶ್ ದೊಡ್ಮನಿ, ಪಿ.ಬಿ ಪ್ರಕಾಶ್ ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕ್ರೀಡಾ ಕೂಟದಲ್ಲಿದ್ದರು.

error: Content is protected !!