ಆದರ್ಶ ಪ್ರತಿಷ್ಠಾನದಿಂದ ವಿಶ್ವ ಧ್ಯಾನ ದಿನಾಚರಣೆ ಕಾರ್ಯಕ್ರಮ

ಆದರ್ಶ ಪ್ರತಿಷ್ಠಾನದಿಂದ ವಿಶ್ವ  ಧ್ಯಾನ ದಿನಾಚರಣೆ ಕಾರ್ಯಕ್ರಮ

ದಾವಣಗೆರೆ, ಡಿ. 29 – ಚಂಚಲಯುಕ್ತ ಮನಸ್ಸನ್ನು ಮುಕ್ತಗೊಳಿಸಿ ಏಕಾಗ್ರತೆಯಿಂದ ಮನಸ್ಸನ್ನು ಪ್ರಶಾಂತಗೊಳಿಸುವ ಸುಂದರ ಕಲೆಯೇ ಅಷ್ಟಾಂಗ ಯೋಗ ಧ್ಯಾನದ ಒಂದು ಮಾರ್ಗ ಎಂದು ಯೋಗ ತಜ್ಞ ರಾಘವೇಂದ್ರ ಗುರೂಜಿ ಅಭಿಪ್ರಾಯಪಟ್ಟರು.

ನಗರದ ಆದರ್ಶ ಪ್ರತಿಷ್ಠಾನದಲ್ಲಿ ಏರ್ಪಡಿಸಿದ್ದ ಪ್ರಥಮ ವರ್ಷದ ಅಂತರರಾಷ್ಟ್ರೀಯ ವಿಶ್ವ ಧ್ಯಾನ ದಿನಾಚರಣೆ ಕಾರ್ಯಕ್ರಮದಲ್ಲಿ ಸರಳ ಧ್ಯಾನದ ಕುರಿತು ಅವರು ಉಪನ್ಯಾಸ ನೀಡಿದರು.

ಇಂದಿನ ಒತ್ತಡಯುಕ್ತ ಬದುಕಿಗೆ ಧ್ಯಾನ ಸೂಕ್ತ ಮಾರ್ಗವಾಗಿದೆ. ಧ್ಯಾನವು ಪ್ರಾರಂಭದಲ್ಲಿ ಕಷ್ಟವಾದರೂ ನಿಗದಿತ ವೇಳೆಯಲ್ಲಿ ಪ್ರತಿನಿತ್ಯ ಅಭ್ಯಾಸದಿಂದ ಅಂತರಂಗ ಶುದ್ಧಿ, ಅರಿವಿನೆಡೆಗೆ ಸಾಗಿ ಮನಸ್ಸು ನೆಮ್ಮದಿಯ ತಾಣವಾಗಿ ಪರಿವರ್ತನೆಗೊಳ್ಳುವುದು. ಇವೆಲ್ಲವೂ ಸಾಧನೆಯಿಂದ ಮಾತ್ರ ಸಾಧ್ಯ. ಧ್ಯಾನ ಮೂಲ ಅರಿವು ಸಿಗಬೇಕಾದರೆ ಸರಿಯಾದ ಗುರುವಿನ ಮಾರ್ಗದರ್ಶನ ಪಡೆಯುವುದು ಸೂಕ್ತ ಎಂದು ರಾಘವೇಂದ್ರ ಗುರೂಜಿ ತಿಳಿಸಿದರು.

error: Content is protected !!