ವಿಜ್ಞಾನ ನಾಟಕ ಸ್ಪರ್ಧೆ ರದ್ದು : ಮಕ್ಕಳಿಗೆ ದೆಹಲಿ ಪ್ರವಾಸ ಭಾಗ್ಯ

ವಿಜ್ಞಾನ ನಾಟಕ ಸ್ಪರ್ಧೆ ರದ್ದು : ಮಕ್ಕಳಿಗೆ ದೆಹಲಿ ಪ್ರವಾಸ ಭಾಗ್ಯ

ಚನ್ನಗಿರಿ ಕ್ಷೇತ್ರದ ಮಾವಿನಕಟ್ಟೆ ಗ್ರಾಮದ ಸರ್ಕಾರಿ ಶಾಲೆ ಮಕ್ಕಳಿಗೆ ಆಸರೆಯಾದ  ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ, ಡಿ. 29 –  ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಆಸರೆಯಿಂದ ಚನ್ನಗಿರಿ ಕ್ಷೇತ್ರದ ಮಕ್ಕಳಿಗೆ ನವದೆಹಲಿ ಪ್ರವಾಸ ಭಾಗ್ಯ ಸಿಕ್ಕಿದೆ.

ಚನ್ನಗಿರಿ ಕ್ಷೇತ್ರದ ಮಾವಿನಕಟ್ಟೆ ಗ್ರಾಮದ ಸರ್ಕಾರಿ ಶಾಲೆ ಮಕ್ಕಳು ರಾಷ್ಟ್ರೀಯ ವಿಜ್ಞಾನ ನಾಟಕ ಸ್ಪರ್ಧೆಗೆ ಆಯ್ಕೆಯಾಗಿ ನಿನ್ನೆ ದೆಹಲಿಗೆ ತೆರಳಿದ್ದರು. ಆದರೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದಿಂದ ಸ್ಪರ್ಧೆ ರದ್ದಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ನಿರಾಸೆ ಉಂಟಾಯಿತು.

ಈ ಬಗ್ಗೆ ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಮಾವಿನಕಟ್ಟೆ ಗ್ರಾಮದ ಸರ್ಕಾರಿ ಶಾಲೆ ಮಕ್ಕಳಿಗೆ ಸಂಸತ್ ವೀಕ್ಷಣೆಗೆ ಸಂಸದರು ಅವಕಾಶ ಕಲ್ಪಿಸಿದರು.

ಮಕ್ಕಳಿಗೆ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ವೀಕ್ಷಿಸಲು ಡಾ.ಪ್ರಭಾ ಮಲ್ಲಿಕಾರ್ಜುನ್‌ ಅವರು ವೈಯಕ್ತಿಕವಾಗಿ ಸಹಾಯ ಮಾಡಿದರು. ಇದರಿಂದ ಮಕ್ಕಳು ಸ್ಪರ್ಧೆ ರದ್ದಾದರೂ ಸಹ ಪ್ರಭಾ ಅವರಿಂದ ದೆಹಲಿ ಪ್ರವಾಸ ಸಾರ್ಥಕ ಭಾವ ಮೂಡಿಸಿತು. ಈ ಬಗ್ಗೆ ಚನ್ನಗಿರಿ ಶಾಸಕರು ತಮ್ಮ ಫೇಸ್‍ಬುಕ್ ಅಕೌಂಟ್‍ನಲ್ಲಿ ಬರೆದುಕೊಂಡಿದ್ದು, ಚನ್ನಗಿರಿ ಕ್ಷೇತ್ರ ಮತ್ತು ವೈಯಕ್ತಿಕವಾಗಿ ಸಂಸದೆ ಪ್ರಭಾ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

error: Content is protected !!