ದಾವಣಗೆರೆ, ಡಿ. 22- ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ವಜಾಗೊಳಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಷ್ಟ್ರಪತಿಗಳಿಗೆ ಒತ್ತಾಯಿಸಿದೆ.
ಶುಕ್ರವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಸಮಿತಿ ಸದಸ್ಯರು, ಸಂಸತ್ ಅವಧಿವೇಶನದಲ್ಲಿ ಅಮಿತ್ ಶಾ ಅವರು ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅವರು ಗೃಹ ಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ಯಾವ ನೈತಿಕತೆಯೂ ಇಲ್ಲ ಎಂದು ಸಮಿತಿಯ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್ ಹೇಳಿದರು.
ಷಾ ಅವರ ಹೇಳಿಕೆ ಇಡೀ ಪ್ರಜಾಪ್ರಭುತ್ವವನ್ನೇ ಅಣಿಕಿಸಿದಂತಾಗಿದೆ. ಹೀಗಾಗಿ ಕೂಡಲೇ ಅಮಿತ್ ಶಾ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬುಳ್ಳಸಾಗರ ಸಿದ್ದರಾಮಣ್ಣ, ವಿಜಯಲಕ್ಷ್ಮಿ, ಮಹಾಂದೇಶ್ ಹರಿಹರ,
ತುರ್ಚಘಟ್ಟ ನಾಗರಾಜ್, ತುರ್ಚಘಟ್ಟ ಖಾಲಿದ್ ಅಲಿ, ಮಂಜುನಾಥ್, ಮಹಾಂತೇಶ್ ಹಾಲವರ್ತಿ, ಶಂಕರ್, ಮಂಜು ನಾಗಸನಹಳ್ಳಿ ಇತರರು ಉಪಸ್ಥಿತರಿದ್ದರು.