ಕೆ.ಎನ್.ಹಳ್ಳಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ವಿಮಾನಯಾನ ಭಾಗ್ಯ

ಕೆ.ಎನ್.ಹಳ್ಳಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ವಿಮಾನಯಾನ ಭಾಗ್ಯ

ಮಲೇಬೆನ್ನೂರು, ಡಿ.19- ಕಡರನಾಯ್ಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ವಿಮಾನಯಾನ ಭಾಗ್ಯ ದೊರೆತಿದ್ದು, ವಿದ್ಯಾರ್ಥಿಗಳು ಹರ್ಷಗೊಂಡಿದ್ದಾರೆ.  ಸರ್ಕಾರಿ ಶಾಲಾ ಮಕ್ಕಳ ವಿಮಾನಯಾನ ಪ್ರವಾಸ ಜಿಲ್ಲೆಯಲ್ಲೇ ಇದೇ ಪ್ರಥಮ ಎಂಬ ಹೆಗ್ಗಳಿಕೆಗೆ ಕೆ.ಎನ್.ಹಳ್ಳಿ ಶಾಲೆ ಪಾತ್ರವಾಗಿದೆ.

ಸರ್ಕಾರಿ ಶಾಲೆಗಳೆಂದರೆ ಅಸಡ್ಡೆ ತೋರುವ ಈ ಕಾಲಘಟ್ಟದಲ್ಲಿ ಖಾಸಗಿ ಶಾಲೆಗಳಿಗೆ ಏನು ಕಡಿಮೆಯಿಲ್ಲ ಎಂದು ಕೆ.ಎನ್.ಹಳ್ಳಿಯ ಈ ಶಾಲೆ ತೋರಿಸಿ ಕೊಟ್ಟಿದೆ.

ಸರ್ಕಾರಿ ಶಾಲೆಗಳಲ್ಲಿ ಬಡ ವಿದ್ಯಾರ್ಥಿಗಳು ಹೆಚ್ಚಾಗಿ ಓದುತ್ತಿದ್ದು, ಗ್ರಾಮದಲ್ಲಿ ಕೂಲಿ ಮಾಡಿ ಜೀವನ ಸಾಗಿಸುವ ಪೋಷಕರು ಸಹ ತಮ್ಮ ಮಕ್ಕಳಿಗೆ ವಿಮಾನಯಾನ ಪ್ರವಾಸಕ್ಕೆ ಸಹಕರಿಸಿದರುವುದಕ್ಕೆ ಈ ಗ್ರಾಮದ ವಿಶೇಷವಾಗಿದೆ. 

ಮಕ್ಕಳಿಗೆ ಆಧುನಿಕತೆಯ ಪರಿಚಯ ಮಾಡಿಸಬೇಕು ಮತ್ತು ಆತ್ಮವಿಶ್ವಾಸ ತುಂಬಬೇಕೆಂಬ ನಿಟ್ಟಿನಲ್ಲಿ ಪೋಷಕರನ್ನು ಕೇಳಿದಾಗ ನಮ್ಮ ಕಷ್ಟ ಎಷ್ಟೇ ಇರಲಿ ನಮ್ಮ ಮಕ್ಕಳನ್ನು ವಿಮಾನಯಾನ ಪ್ರವಾಸಕ್ಕೆ ಕಳಿಸಿ ಕೊಡುತ್ತೇವೆ ಎಂದ ಪೋಷಕರನ್ನು ಅಭಿನಂದಿಸುವುದಾಗಿ ಶಾಲೆಯ ಮುಖ್ಯೋಪಾಧ್ಯಾಯರಾದ ಎ.ಕೆ.ಮಂಜಪ್ಪ ಮತ್ತು ಹಿರಿಯ ಶಿಕ್ಷಕ ಸಿ.ಪಿ.ಕುಬೇರಪ್ಪ ತಿಳಿಸಿದರು.

ತಲಾ ಐದು ಸಾವಿರ ರೂಪಾಯಿಗಳನ್ನು ಪೋಷಕರು ನೀಡಿದ್ದಾರೆ. ಒಟ್ಟು 26 ವಿದ್ಯಾರ್ಥಿಗಳು ಪ್ರವಾಸದಲ್ಲಿದ್ದು ಶಿವಮೊಗ್ಗದಿಂದ ಗುರುವಾರ ಬೆಂಗಳೂರಿಗೆ ವಿಮಾನದಲ್ಲಿ ತೆರಳಿ ಅಲ್ಲಿ 2 ದಿನ ಪ್ರೇಕ್ಷಣಿಯ ಸ್ಥಳಗಳನ್ನು ವೀಕ್ಷಣೆ ಮಾಡಲಿದ್ದಾರೆ ಎಂದು ಶಿಕ್ಷಕರಾದ ಸಂಗಮೇಶ್, ಜ್ಯೋತಿಲಕ್ಷ್ಮಿ, ಸವಿತಾ ತಿಳಿಸಿದರು.

ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೊಟ್ರೇಶಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ದುರುಗಪ್ಪ, ಡಯಟ್ ಪ್ರಿನ್ಸಿಪಾಲ್ ಗೀತಾ, ಡಯಟ್ ಉಪನ್ಯಾಸಕಿ ಪೂರ್ಣಿಮಾ, ಸಿಆರ್ ಪಿಗಳಾದ ಸುನೀತ, ಕೆ.ಎನ್.ಬಸವರಾಜಯ್ಯ, ಬಿಆರ್‌ಪಿ ಭಾಗ್ಯಲಕ್ಷ್ಮಿ,ಬಿಆರ್‌ಸಿ ಕೃಷ್ಣಪ್ಪ, ಎಸ್.ಡಿ.ಎಂ.ಸಿ ಅಧ್ಯಕ್ಷ ಶಿವರಾಜ್ ಹಾಗೂ ಎಲ್ಲಾ ಸದಸ್ಯರು ಮತ್ತು ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ತಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಚಂದ್ರಪ್ಪ, ಕಾರ್ಯದರ್ಶಿ ಶರಣ್ ಕುಮಾರ್ ಹೆಗಡೆ ಅವರು ವಿದ್ಯಾರ್ಥಿಗಳ ವಿಮಾನಯಾನ ಪ್ರವಾಸಕ್ಕೆ ಶುಭ ಹಾರೈಸಿ, ಶಿಕ್ಷಕರ ಈ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

error: Content is protected !!