ದೇವರಲ್ಲಿ ಅಖಂಡ ಭಕ್ತಿ ಬೇಕು : ಪೇಜಾವರ ಶ್ರೀಗಳು

ದೇವರಲ್ಲಿ  ಅಖಂಡ ಭಕ್ತಿ ಬೇಕು : ಪೇಜಾವರ ಶ್ರೀಗಳು

ಭರಮಸಾಗರ, ಡಿ. 18- ಅರ್ಜುನ ಕೃಷ್ಣ ನಾರಾಯಣ ಪ್ರತೀಕ. ಪ್ರಾಮಾಣಿಕ ಪ್ರಯತ್ನಶೀಲತೆಗೆ ಅರ್ಜುನ ಮತ್ತು ದೇವಾನುಗ್ರಹಕ್ಕೆ ಕೃಷ್ಣ ಕಾರಕರಾಗುತ್ತಾರೆ. ಇದು ಒಂದು ರೀತಿಯಲ್ಲಿ ಹಕ್ಕಿಯ ಎರಡು ರೆಕ್ಕೆಗಳಿದ್ದಂತೆ ಎಂದು ಉಡುಪಿಯ ಅಧೋಕ್ಷಜ ತೀರ್ಥ ಪರಂಪರೆಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಅನುಗ್ರಹ ಸಂದೇಶದಲ್ಲಿ ತಿಳಿಸಿದರು.

ಸ್ಥಳೀಯ ಪವಮಾನ ಪ್ರತಿಷ್ಠಾನ ಹಾಗೂ ಬ್ರಾಹ್ಮಣ ಸಮಾಜದವರು ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ  ಶ್ರೀಗಳು ಮಾತನಾಡಿದರು.

ದೈವಾನುಗ್ರಹಕ್ಕೆ ಪ್ರತೀಕ ಮದುವೆ ಪ್ರಯತ್ನವು ಪ್ರಾಮಾಣಿಕವಾಗಿದ್ದಾಗ ದೇವರ ಅನುಗ್ರಹ ತಂತಾನೆ ಒದಗಿ ಬರುತ್ತದೆ. ದೇವರಲ್ಲಿ ಅಖಂಡ ಭಕ್ತಿಯು ಬೇಕು. ಅದರ ಜೊತೆ ಪ್ರಯತ್ನಶೀಲತೆಯು ಬೇಕು. ದೈವಭಕ್ತಿ ಪ್ರಯತ್ನಗಳಲ್ಲಿ ಪ್ರಾಮಾಣಿಕತೆ ಇದ್ದಲ್ಲಿ ಸಮಾಜವು ಸಹ ನೆಮ್ಮದಿಯ ಬದುಕು ಕಾಣಲು ಸಾಧ್ಯ ಎಂದರು.

ಜನತಾವಾಣಿಯ ಬಿ.ಜೆ. ಅನಂತಪದ್ಮನಾಭರಾವ್ ಅವರ ಕುಟುಂಬ ಪಾದಪೂಜೆ ಮಾಡಿ, ಫಲಕಾಯ ಗುರು ಕಾಣಿಕೆಯನ್ನು ನೀಡಿ ಭಕ್ತಿ ಸಮರ್ಪಿಸಿದರು.

ಪವಮಾನ ಪ್ರತಿಷ್ಠಾನ ಕಳೆದ 20 ವರ್ಷಗಳಿಂದ ಮಾಡಿದ ಕಾರ್ಯಕ್ರಮಗಳ ಕಿರು ಪರಿಚಯವನ್ನು ಹಿರಿಯ ಪತ್ರಕರ್ತ ಬಿ.ಜೆ. ರಾಮಚಂದ್ರರಾವ್ ಮಾಡಿಕೊಟ್ಟರು.

ಭಕ್ತರಿಗೆ ವಿಜಯಲಕ್ಷ್ಮಿ ಅವರು ಅವಲಕ್ಕಿ ಪ್ರಸಾದ ವಿತರಣೆ ಮಾಡಿದರು. ಗಾಯತ್ರಿ ಕೋಮಲ ಸಂಗಡಿಗರು ಶ್ರೀ ಕೃಷ್ಣನ ಪ್ರಾರ್ಥನೆ ಮಾಡಿದರು. ಬಿ.ಜೆ. ಅನಂತಪದ್ಮನಾಭರಾವ್ ಸ್ವಾಗತಿಸಿದರು. ಅಂಜನಾರಾವ್ ವಂದಿಸಿದರು.  

error: Content is protected !!