ಕೊಟ್ಟೂರು, ಡಿ.15- ತಾಲ್ಲೂಕಿನ ಉಜ್ಜಿನಿ ಗ್ರಾಮದ ಕ್ಷೇತ್ರನಾಥ ಜಗದ್ಗುರು ಮರುಳಸಿದ್ದೇಶ್ವರ ಸ್ವಾಮಿಯ ಲಕ್ಷ ದೀಪೋತ್ಸವ, ಲಿಂ. ಮರುಳಸಿದ್ಧ ಶಿವಾಚಾರ್ಯ ಶ್ರೀಗಳ 13ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದ ಅಂಗವಾಗಿ ಶ್ರೀ ಪೀಠದ ಆವರಣದಲ್ಲಿ ಸಾಮೂಹಿಕ ವಿವಾಹ ನಡೆಯಿತು.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿಗಳು ಕುಟುಂಬದ ಗುರು-ಹಿರಿಯರ ಮಾರ್ಗದರ್ಶನದಲ್ಲಿ ಜೀವನ ಸಾಗಿಸ ಬೇಕು. ಹೆಣ್ಣು ತವರುಮನೆ ಹಾಗೂ ಗಂಡನ ಮನೆಗೆ ಕೀರ್ತಿ ತರುವಂತೆ ನಡೆಯಬೇಕು. ಕುಟುಂಬವನ್ನು ತೊರೆದು ಬಂದ ಹೆಣ್ಣನ್ನು ಪ್ರೀತಿಯಿಂದ ನೋಡಿ ಕೊಂಡಾಗ ಮನೆಯಲ್ಲಿ ಶಾಂತಿ-ನೆಮ್ಮದಿ ಶಾಶ್ವತವಾಗಿ ನೆಲೆಸಲಿದೆ ಎಂದು ಉಜ್ಜಿನಿ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಕಲಕೇರಿ ಶ್ರೀಗಳು, ನಾವಡಗಿ ಶ್ರೀಗಳು, ದೇವರ ಹಿಪ್ಪರಗಿ ಶ್ರೀಗಳು, ಕುರವತ್ತಿ ಶ್ರೀಗಳು, ದಿಂಡದಹಳ್ಳಿ ಶ್ರೀಗಳು, ಶಿವಾಚಾರ್ಯರು ಮತ್ತು ಇತರರು ಸಾಮೂಹಿಕ ವಿವಾಹದಲ್ಲಿ ಉಪಸ್ಥಿತರಿದ್ದರು.