ಹರಪನಹಳ್ಳಿ,ಡಿ.4- ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಇಂದು ಚಾಲನೆ ನೀಡಿದರು.
ಪಟ್ಟಣದ ಬಾಲಕಿಯರ ಪ್ರೌಢಶಾಲೆ ಸೇರಿ ಕ್ಷೇತ್ರದ ಒಟ್ಟು 33 ಸ.ಹಿ.ಪ್ರಾ ಶಾಲೆಗಳಿಗೆ 2023-24ನೇ ಸಾಲಿನ ಕೆಕೆಆರ್‍ಡಿಬಿ ಯೋಜನೆಯಡಿ ಭೌತಿಕ ಮತ್ತು ಗುಣಾತ್ಮಕ ಮೂಲಭೂತ ಸೌಲಭ್ಯ ಒದಗಿಸುವುದು, ಶಾಲಾ ಕೊಠಡಿಗಳ ಉನ್ನತೀಕರಣ ಮತ್ತು ಸೌರಶಕ್ತಿ ವ್ಯವಸ್ಥೆ ಘಟಕಗಳನ್ನು ಸ್ಥಾಪಿಸುವ ಕಾಮಗಾರಿಗೆ ಚಾಲನೆ ನೀಡಿದರು.
ಬಳಿಕ ದೇವರ ತಿಮ್ಮಾಲಾಪುರ, ಹರಿಹರ ರಸ್ತೆಯ ಆಶ್ರಯ ಕ್ಯಾಂಪ್ ಮತ್ತು ಚಿರಸ್ತಹಳ್ಳಿ ಗ್ರಾಮದ ಸ.ಹಿ.ಪ್ರಾ ಶಾಲೆ ಸೇರಿ ಒಟ್ಟು 46 ಶಾಲೆಗಳಿಗೆ 2023-24ನೇ ಸಾಲಿನ ಕೆಕೆಆರ್‍ಡಿಬಿ ಯೋಜನೆಯಡಿ ಭೌತಿಕ ಮತ್ತು ಗುಣಾತ್ಮಕ ಮೂಲಭೂತ ಸೌಲಭ್ಯ ಒದಗಿಸುವ ಕಾಮಗಾರಿಗೆ ಚಾಲನೆ ನೀಡಿದರು.
ನಂತರ ತಾಲ್ಲೂಕಿನ ಇಟ್ಟಿಗುಡಿ ಗ್ರಾಮದಿಂದ ನೀಲಗುಂದ ಕ್ರಾಸ್‍ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಕಡತಿ ಗ್ರಾಮ ಪಂಚಾಯ್ತಿಯಲ್ಲಿ ವಸತಿ ಯೋಜನೆಯಡಿ ಮಂಜೂರಾದ ಮನೆಗಳ ಹಕ್ಕು ಪತ್ರ ಗಳನ್ನು ಫಲಾನುಭವಿಗಳಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವೆಂಕಟೇಶ್, ಸದಸ್ಯರಾದ ಅಬ್ದುಲ್ ರೆಹಮಾನ್, ಗೊಂಗಡಿ ನಾಗರಾಜ, ಉದ್ದಾರ ಗಣೇಶ್, ಜಾಕೀರ್ ಹುಸೇನ್, ಎಇಇ ಕುಬೇಂದ್ರನಾಯ್ಕ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಲೇಪಾಕ್ಷಪ್ಪ, ಮುಖ್ಯ ಶಿಕ್ಷಕ ಚೇತನ್, ಗುಡಿ ನಾಗರಾಜ, ಎಲ್.ಎಂ.ನಾಯ್ಕ್, ಸೈಯದ್ ಇರ್ಫಾನ್, ಶಂಕರ್ ಸೇರಿದಂತೆ ಇತರರು ಇದ್ದರು.