ದಾವಣಗೆರೆ, ಡಿ. 2- ನಗರದ ಲಯನ್ಸ್ ಕ್ಲಬ್ ಸಾಮಾನ್ಯ ಸಭೆಯು ಲಯನ್ಸ್ ಭವನದಲ್ಲಿ ನಿನ್ನೆ ನಡೆಯಿತು. ಹಿರಿಯರ ಆರೋಗ್ಯ, ತಾಳ್ಮೆ, ಉತ್ಸಾಹ ಕುರಿತು ಹಿರಿಯ ಲಯನ್ಸ್ ಸದಸ್ಯರೂ ಆದ ವರ್ತಕ ಟಿ.ಎಂ. ಪಂಚಾಕ್ಷರಯ್ಯ ಅವರು ವಿಶೇಷ ಉಪನ್ಯಾಸ ನೀಡಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಿ. ಉಳವಯ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕಾರ್ಯದರ್ಶಿಯೂ ಆದ ಹಿರಿಯ ಶಿಕ್ಷಕ ಸಿ. ಅಜಯ್ ನಾರಾಯಣ್ ಸಭೆಯ ನಡಾವಳಿಗಳನ್ನು ಓದಿದರು.
January 9, 2025