ರಾಣೇಬೆನ್ನೂರು ಕುರುಬ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರ, ಕನಕದಾಸರ ಜಯಂತಿ
ರಾಣೇಬೆನ್ನೂರು, ಅ.28- ಕುರುಬ ಸಮಾಜ ಬಾಂಧವರು ದುಶ್ಚಟಗಳಿಂದ ದೂರ ವಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ತಮ್ಮ ಮನೆಗಳನ್ನು ಉದ್ಧಾರ ಮಾಡಿಕೊಳ್ಳುವುದರ ಜೊತೆಗೆ ಸಮಾಜದ ಬಲವರ್ಧನೆಗೆ ಮುಂದಾಗ ಬೇಕು ಎಂದು ಕಾಗಿನೆಲೆ ಗುರುಪೀಠದ ಶ್ರೀ ನಿರಂಜನಾನಂದ ಸ್ವಾಮೀಜಿ ಅವರು ಕರೆ ನೀಡಿದರು. ಶ್ರೀಗಳು ಇಲ್ಲಿನ ಬೀರಪ್ಪನ ಹೊರಗುಡಿಯಲ್ಲಿ ನಡೆದ ಕುರುಬ ನೌಕರ ಸಂಘದವರ ಪ್ರತಿಭಾ ಪುರಸ್ಕಾರ ಹಾಗೂ ಕನಕದಾಸ ಜಯಂತಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಾಸಕ ಪ್ರಕಾಶ ಕೋಳಿವಾಡ ಅವರು, ಜನತೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಜೊತೆಗೆ ಅವರು ಬದುಕು ಕಟ್ಟಿಕೊಳ್ಳಲು ಉಪಯುಕ್ತವಾಗುವಂತಹ ಕೌಶಲ್ಯ ತರಬೇತಿ ಪಡೆದುಕೊಳ್ಳಲು ಪ್ರೋತ್ಸಾಹಿಸುವಂತೆ ಹೇಳಿ, ನನ್ನ ಕ್ಷೇತ್ರದಲ್ಲಿನ ನಿರುದ್ಯೋಗ ರಹಿತ ಕ್ಷೇತ್ರದ ನನ್ನ ಕನಸಿಗೆ ಸಹಕರಿಸುವಂತೆ ಕರೆ ನೀಡಿದರು.
ಕಾಂಗ್ರೆಸ್ ಮುಖಂಡ ಡಾ. ಪ್ರವೀಣ ಖನ್ನೂರ, ಸಮಾಜದ ಸುಭಾಶ್‌ಚಂದ್ರ ಕುರುಬರ, ಕರಬಸಪ್ಪ ಚಿನ್ನಿಕಟ್ಟಿ, ಷಣ್ಮುಖಪ್ಪ ಕಂಬಳಿ, ಹನುಮಂತಪ್ಪ ಪಟಸಕಿ, ಎಸ್.ಎಸ್.ಮಳ್ಳಿ ವೇದಿಕೆಯಲ್ಲಿದ್ದರು. ರಜನಿ ಕುರಿಗಾರ ಸ್ವಾಗತ, ತಿಪ್ಪೇಶ ಲಕ್ಕಿಕೋನಿ ಪ್ರಾರ್ಥನೆ ಮಾಡಿದರು.ಸುಲೋಚನ ಮಹಾದೇವಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.