ಪ್ರಥಮ ಚಿಕಿತ್ಸೆ ಜಾಗೃತಿ ಕಾರ್ಯಕ್ರಮ ಯಶಸ್ವಿ

ಪ್ರಥಮ ಚಿಕಿತ್ಸೆ ಜಾಗೃತಿ ಕಾರ್ಯಕ್ರಮ ಯಶಸ್ವಿ

ದಾವಣಗೆರೆ, ಸೆ.30- ಸುವಿದ್ಯಾ ನಿಧಿ ವತಿಯಿಂದ ಸುಶೃತ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಸಹಯೋಗದಲ್ಲಿ ಕಾಲೇಜಿನಲ್ಲಿ ಪ್ರಥಮ ಚಿಕಿತ್ಸೆ ಜಾಗೃತಿ ಕಾರ್ಯಕ್ರಮ ನಡೆಯಿತು.

ತುರ್ತುಸ್ಥಿತಿ ನಿರ್ವಹಣೆ ಮತ್ತು ಜೀವ ಉಳಿಸುವ ಪ್ರಥಮ ಚಿಕಿತ್ಸೆ ಕುರಿತು ರಾಷ್ಟ್ರೀಯ ತರಬೇತುದಾರ ಡಾ.ವಿ.ಎಲ್‌.ಎಸ್‌. ಕುಮಾರ್ ಕಾಲೇಜಿನ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು. ಕಿವಿ, ಮೂಗು, ಗಂಟಲು ತಜ್ಞ ಡಾ.ಎ.ಎಂ. ಶಿವಕುಮಾರ್, ಸುವಿದ್ಯಾ ನಿಧಿ ಗುಂಪಿನ ಸದಸ್ಯ ಎಂ. ಕುಮಾರ್‌, ಸುಶೃತ ಆರೋಗ್ಯ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಬಿ.ಜಿ. ಸತೀಶ್, ಸುಶೃತ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ. ಕೆ.ಹೆಚ್‌. ಅಕ್ಬರ್ ಖಾನ್, ಉಪನ್ಯಾಸಕ ಡಾ. ಸ್ಟೇಸಿ ಜೋಸೆಫ್, ಡಾ. ಸಹನ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!