ತರಳಬಾಳು ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಜಿ.ನಿಜಲಿಂಗಪ್ಪ ನಿಧನ

ತರಳಬಾಳು ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಜಿ.ನಿಜಲಿಂಗಪ್ಪ ನಿಧನ

ಸಾಣೇಹಳ್ಳಿ, ಸೆ.8- ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ನಿವೃತ್ತ ಆಡಳಿತಾಧಿಕಾರಿಯಾಗಿದ್ದ ನಿರ್ಥಡಿಯ ಜಿ. ನಿಜಲಿಂಗಪ್ಪ ಅವರು ಶನಿವಾರ ನಿಧನ ಹೊಂದಿದ್ದು, ಅವರ ಪಾರ್ಥಿವ ಶರೀರಕ್ಕೆ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಪುಷ್ಟ ನಮನದ ಶ್ರದ್ಧಾಂಜಲಿ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ಶ್ರೀಗಳು, ನಿಜಲಿಂಗಪ್ಪ ಅವರಿಗೆ  ಸ್ವಾಮಿಗಳಾದ ನಮ್ಮ ಬಗ್ಗೆ ಅಪಾರ ಗೌರವ, ಪ್ರೀತಿ ಇತ್ತು. ನಿಸ್ಪೃಹ ಸೇವೆ ಸಲ್ಲಿಸಿದಂಥವರು. 

ಅವರಿಗೆ ಮನೆ ಮತ್ತು ಮಠ ಬೇರೆ ಬೇರೆ ಎನ್ನುವ ಭಾವನೆ ಇರಲಿಲ್ಲ. ಯಾವಾಗಲೂ ಮಠ ಅಥವಾ ಆಡಳಿತ ಕಛೇರಿಯಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದರು. ಕಛೇರಿಯ ಎಲ್ಲ ಸಿಬ್ಬಂದಿಗಳನ್ನು ಜೊತೆಯಲ್ಲೇ ಕರೆದುಕೊಂಡು ಮಠದಲ್ಲಿ ಪ್ರಸಾದ ಮಾಡುತ್ತಿದ್ದರು ಎಂದು ನಿಜಲಿಂಗಪ್ಪ ಅವರ ಸರಳತೆಯನ್ನು ಸ್ಮರಿಸಿದರು.

ಹಿರಿಯ ಜಗದ್ಗುರುಗಳ ಪ್ರೀತಿ, ವಿಶ್ವಾಸ ಗಳಿಸಿಕೊಂಡಂತೆ, ಡಾ. ಜಗದ್ಗುರುಗಳ ಹಾಗೂ ನಮ್ಮ ಪ್ರೀತಿ ವಿಶ್ವಾಸಕ್ಕೂ ಭಾಜನರಾಗಿದ್ದರು. ನಿವೃತ್ತಿಯಾದ ನಂತರವೂ ಮಠದ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು ಎಂದು ಶ್ರೀಗಳು ಹೇಳಿದರು.

ಸಮಾಜದಲ್ಲಿ ಶ್ರೀಮಂತರಿಗಿಂತ ಹೆಚ್ಚು ಬೆಲೆ ಇರುವುದು ಜನಪರ ಕಾಳಜಿಯನ್ನಿಟ್ಟುಕೊಂಡು, ಒಲವನ್ನು ತೋರಿಸಿ, ಪ್ರೀತಿ, ವಿಶ್ವಾಸವನ್ನು ಬೆಳೆಸಿಕೊಂಡವರಿಗೆ. ಅಂತಹ ವ್ಯಕ್ತಿ ಬಡವನಾಗಿದ್ದರೂ ಅವನ ಬಗ್ಗೆ ಪ್ರೀತಿ, ಗೌರವ ತೋರಿಸುವರು. ಶ್ರೀಮಂತರು ದರ್ಪ, ದೌರ್ಜನ್ಯವನ್ನು ತೋರಿಸಿದರೆ ಅವರ ಹಣಕ್ಕೆ ತಲೆಬಾಗುವುದು ವಿರಳ. ಆ ನೆಲೆಯಲ್ಲಿ ನಿಜಲಿಂಗಪ್ಪನವರು ಎಲ್ಲರ ಪ್ರೀತಿ, ವಿಶ್ವಾಸ ಗಳಿಸಿಕೊಂಡಿದ್ದಾರೆ. ಆದ್ದರಿಂದ ಮನೆತನದವರು ನಿಜಲಿಂಗಪ್ಪನವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸೂಚ್ಯವಾಗಿ ತಿಳಿಸಿದರು.

error: Content is protected !!