ಬಾನು, ಶ್ವೇತಾ, ಪರ್ವೀನ್ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರು

ಬಾನು, ಶ್ವೇತಾ, ಪರ್ವೀನ್ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರು

ಹರಪನಹಳ್ಳಿ, ಸೆ.  4- 2024-25 ನೇ ಸಾಲಿನ ವಿಜಯನಗರ  ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಉಚ್ಚಂಗಿದುರ್ಗದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ   ಶಿಕ್ಷಕಿ  ಬಿ.ಜಿ. ಬಾನು, ಕಿರಿಯ ಪ್ರಾಥಮಿಕ ವಿಭಾಗದಿಂದ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಹಾರಕನಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಿ. ಶ್ವೇತ ಹಾಗೂ ಪ್ರೌಢಶಾಲಾ ವಿಭಾಗದಿಂದ ಸರ್ಕಾರಿ ಆದರ್ಶ ವಿದ್ಯಾಲಯದ ಪರ್ವೀನ್‌ ಅವರುಗಳು ಆಯ್ಕೆಯಾಗಿರುತ್ತಾರೆ.

ಆಯ್ಕೆಯಾದ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್. ಲೇಪಾಕ್ಷಪ್ಪ,  ವಿಜಯನಗರ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ  ಎಸ್.ಬಸವರಾಜ,  ಸರ್ಕಾರಿ ಆದರ್ಶ ವಿದ್ಯಾಲ ಯದ  ಮುಖ್ಯ ಶಿಕ್ಷಕ ಹೆಚ್ .ಕೆ. ಚಂದ್ರಪ್ಪ, ನೌಕರರ ಸಂಘ, ಪತ್ತಿನ ಸಹಕಾರಿ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಿದ್ದಾರೆ.

error: Content is protected !!