ದಾವಣಗೆರೆ, ಸೆ.4- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬೆಂಗಳೂರು ಕೇಂದ್ರೀಯ ವಿಭಾಗದ 4 ನಿಗಮಗಳ ನೌಕರರ ಸಹಕಾರ ಸಂಘದಿಂದ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ದಾವಣಗೆರೆ ವಿಭಾಗದ ಕಿರಿಯ ಸಹಾಯಕ ಎಸ್. ಓಂಕಾರಪ್ಪ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸತೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದಿಂದ ನಡೆದ ಈ ಚುನಾವ ಣೆಯಲ್ಲಿ ದಾವಣಗೆರೆ ವಿಭಾಗದ ನೌಕರರು ಅಧ್ಯಕ್ಷ ಸ್ಥಾನ ಅಲಂಕರಿಸುವ ಮೂಲಕ 40 ವರ್ಷದ ಇತಿಹಾಸಕ್ಕೆ ತಿರುವು ನೀಡಿದ್ದಕ್ಕೆ, ದಾವಣಗೆರೆ ವಿಭಾಗದ ನೌಕರರು ಹರ್ಷ ವ್ಯಕ್ತಪಡಿಸಿದ್ದಾರೆ.