ಹರಿಹರ, ಸೆ.3- ನಗರದ ಹಳೆ ಪಿ.ಬಿ. ರಸ್ತೆ, ಆಸ್ಪತ್ರೆ ರಸ್ತೆ ಸೇರಿದಂತೆ ವಿವಿಧ ಸ್ಥಳಗಳಿಗೆ ಇಂದು ಬೆಳಿಗ್ಗೆ ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಉಪಾಧ್ಯಕ್ಷ ಜಂಬಣ್ಣ ಗುತ್ತೂರು ಅವರು ಭೇಟಿ ಕೊಟ್ಟು ರಸ್ತೆಯಲ್ಲಿ ಬಿದ್ದಿರುವ ಕಸವನ್ನು ನಗರಸಭೆಯ ವಾಹನಗಳನ್ನು ಸ್ಥಳಕ್ಕೆ ಕರೆಸಿ ಸಾಗಿಸಲು ಮುಂದಾದರು.
ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಮಾತನಾಡಿ, ನಗರದ ಆಸ್ಪತ್ರೆ ರಸ್ತೆ ಬಹಳಷ್ಟು ಹಾಳಾಗಿದ್ದು, ಇದರಿಂದಾಗಿ ಆಸ್ಪತ್ರೆಗೆ ರೋಗಿಗಳು ಓಡಾಡುವುದಕ್ಕೆ ಪರದಾಡುವಂತೆ ಆಗಿದೆ. ಆದಷ್ಟು ಬೇಗನೇ ರಸ್ತೆ ದುರಸ್ತಿ ಪಡಿಸುವಂತೆ ಮತ್ತು ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುವಂತೆ ಸೂಚಿಸಿದರು.
ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ, ಆರೋಗ್ಯ ಇಲಾಖೆಯ ಸಂತೋಷ, ರವಿಪ್ರಕಾಶ್, ನಗರಸಭೆ ಪೌರ ಕಾರ್ಮಿಕರು ಹಾಜರಿದ್ದರು.