ಚಿಣ್ಣರ ರಾಧೆ, ಕೃಷ್ಣರ ವೇಷಭೂಷಣ ಸ್ಪರ್ಧೆ : ವಿಜೇತರಿಗೆ ಬಹುಮಾನ

ಚಿಣ್ಣರ ರಾಧೆ, ಕೃಷ್ಣರ ವೇಷಭೂಷಣ ಸ್ಪರ್ಧೆ : ವಿಜೇತರಿಗೆ ಬಹುಮಾನ

ದಾವಣಗೆರೆ, ಸೆ.3- ಲಯನ್ಸ್ ಕ್ಲಬ್ ಮತ್ತು ಜ್ಞಾನ ಸೌರಭ ಎಜುಕೇಶನ್ ಟ್ರಸ್ಟಿನ ಸಹಯೋಗದಲ್ಲಿ ಇಲ್ಲಿನ ಲಯನ್ಸ್ ಭವನದಲ್ಲಿ ಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಚಿಣ್ಣರ ಕೃಷ್ಣ, ರಾಧೆಯ ವೇಷಭೂಷಣ ಸ್ಪರ್ಧೆ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಲಯನ್ಸ್‌ ಛೇರ್ಮನ್ ಎಸ್. ವೆಂಕಟಾಚಲಂ ಅವರು, ಜೀವನದಲ್ಲಿ ಶ್ರೀಕೃಷ್ಣನ ಆದರ್ಶ ಮತ್ತು ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಲಯನ್ಸ್ ಕ್ಲಬ್‌ ಉಪಾಧ್ಯಕ್ಷ ಮಹಾಂತೇಶ್ ಒಣರೊಟ್ಟಿ, ಕಾರ್ಯದರ್ಶಿ ಸಿ.ಅಜಯ್ ನಾರಾಯಣ್, ಖಜಾಂಚಿ ಎಸ್. ನಾಗರಾಜ್, ಬಸವರಾಜಪ್ಪ, ವಾಸುದೇವ ರಾಯ್ಕರ್, ಜ್ಞಾನ ಸೌರಭ ಎಜುಕೇಶನ್ ಟ್ರಸ್ಟಿನ ಅಧ್ಯಕ್ಷ ಮಹೇಶ್ವರಪ್ಪ, ಪುಷ್ಪಾ ಮಹೇಶ್ವರಪ್ಪ, ಲಯನ್ಸ್ ಶಾಲೆಯ ಮುಖ್ಯ ಶಿಕ್ಷಕಿ ಪಾವನಾ, ಮಂಜುಳಾ ಇದ್ದರು.

error: Content is protected !!