ದಾವಣಗೆರೆ, ಸೆ. 2 – ಕ್ವಿಲ್ಲಿಂಗ್ ಕಲೆಯ ಮೂಲಕ ವೈವಿಧ್ಯಮಯ ಗಣೇಶ, ಬಸವಣ್ಣನವರು ಮತ್ತಿತರೆ ಕಲಾಕೃತಿ ನೋಡಿ ಸಂತೋಷ ಆಗಿದೆ. ಈ ಭಾಗದಲ್ಲಿ ಹೆಚ್ಚಿನವರಿಗೆ ಇದು ತಿಳಿದಿಲ್ಲ. ಸಹನೆ ಹಾಗೂ ಕ್ರಿಯಾಶೀಲ ವ್ಯಕ್ತಿಗಳಿಂದ ಮಾತ್ರ ಇದು ಸಾಧ್ಯ ಎಂದು ಮಾಜಿ ಮೇಯರ್ ಸುಧಾ ಜಯರುದ್ರೇಶ್ ಹೇಳಿದರು.
ಚೌಕಿಪೇಟೆಯ ಗೌಡರ ಜಯದೇವಪ್ಪ ಮಳಿಗೆಯ ಮಹಡಿಯಲ್ಲಿ ಸೋಮವಾರ ನೀತಾ ಎಚ್. ಗೌಡರ್ ಅವರ ಕ್ವಿಲ್ಲಿಂಗ್ ಕಲಾಕೃತಿಗಳ ಪ್ರದರ್ಶನ ಉದ್ಥಾಟಿಸಿ ಮಾತನಾಡಿದರು.
1ವಾರಗಳ ಕಾಲ ನಡೆಯುವ ಕ್ವಿಲ್ಲಿಂಗ್ ಕಲಾ ಪ್ರದರ್ಶನ ಸಾರ್ವಜನಿಕರಿಗೆ ಮುಕ್ತವಾಗಿದೆ. 13 ದೊಡ್ಡ ಗಾತ್ರದ ಕಲಾಕೃತಿ ಹಾಗೂ 314 ಕ್ಕಿಂತ ಹೆಚ್ಚು ಗಣಪತಿ ಇಡಲಾಗಿದೆ ಎಂದು ಕಲಾವಿದೆ ನೀತಾ ಗೌಡರ್ ಹೇಳಿದರು.
ಈ ಸಂದರ್ಭದಲ್ಲಿ ದಾವಣಗೆರೆ ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ಟಿ.ಎಸ್ ಜಯರುದ್ರೇಶ್, ಗೌಡರ ಮಹಾಲಿಂಗಪ್ಪ, ಉಷಾ ಎಂ ಗೌಡರ್, ಗಂಗಾಧರ್, ಮಧುರಾ, ಹರ್ಷ ಮತ್ತಿತರರು ಉಪಸ್ಥಿತರಿದ್ದರು.