ದಾವಣಗೆರೆ, ಸೆ.1- ನಗರದ ಹೊರ ವಲಯದ ಕಾರಿಗನೂರು ಕ್ರಾಸ್ ಬಳಿಯ ಇನ್ಫೋಟೆಕ್ ಕಂಪ್ಯೂಟರ್ ತರಬೇತಿ ಕೇಂದ್ರದ ರಜತ ಮಹೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಳೆದ 25 ವರ್ಷಗಳಲ್ಲಿ 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕಂಪ್ಯೂಟರ್ ತರಬೇತಿ ಪಡೆದಿರುವುದು ಹೆಮ್ಮೆಯ ವಿಚಾರ ಎಂದು ತರಬೇತಿ ಕೇಂದ್ರದ ಸಂಸ್ಥಾಪಕರಾದ ಅನಿತಾ ಕಲ್ಯಾಣ್ ಕುಮಾರ್ ತಿಳಿಸಿದರು.
ಕಂಪ್ಯೂಟರ್ ಕಲಿಕೆಗೆ ಬೇಕಾದ ಪೂರಕ ವಾತಾವರಣ ಹೊಂದಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ತೇಜಸ್ವಿ ವಿ. ಪಟೇಲ್ ಹೇಳಿದರು.
ಈ ವೇಳೆ ಗ್ರಾ.ಪಂ ಮಾಜಿ ಸದಸ್ಯ ಹೆಚ್.ವಿ. ಶಿವಕುಮಾರ್, ಹೆಚ್.ಕೆ. ವಿರೂಪಾಕ್ಷಪ್ಪ, ಹೆಚ್.ಕೆ. ಮಾಧವ ಮತ್ತು ವಿದ್ಯಾರ್ಥಿಗಳಿದ್ದರು.