ಮಲೇಬೆನ್ನೂರು, ಆ.29- ಭರ್ತಿಯಾಗಿರುವ ಭದ್ರಾ ಜಲಾಶಯಕ್ಕೆ ಕಡಾರನಾಯಕನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಬುಧವಾರ ಗಂಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಲಾಯಿತು.
ಗ್ರಾ.ಪಂ ಅಧ್ಯಕ್ಷೆ ಗಿರಿಜಮ್ಮ ಕರಿಯಪ್ಪ, ಉಪಾಧ್ಯಕ್ಷ ಪರಶುರಾಮ್, ಸದಸ್ಯರಾದ ವಿ.ಕುಬೇರಪ್ಪ, ಭರಮಗೌಡ ಪಾಟೀಲ್, ಹುಸೇನ್ ಸಾಬ್, ಜಿ.ಹೆಚ್.ಬಸವನಗೌಡ, ಜಿ.ಲೋಕೇಶ್, ಕಾರ್ಯದರ್ಶಿ ಬಿ.ದಾನಪ್ಪ, ಕಂಪ್ಯೂಟರ್ ಆಪರೇಟರ್ ವಿದ್ಯಾ, ಬಿಲ್ ಕಲೆಕ್ಟರ್ ತಿಪ್ಪೇಶ್, ಮಾರುತಿ ಸೇರಿದಂತೆ ಇನ್ನೂ ಅನೇಕರು ಈ ವೇಳೆ ಭಾಗವಹಿಸಿದ್ದರು.