ಹರಪನಹಳ್ಳಿಯ ತೆಲಗಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವೈ.ಕಾಶಿನಾಥ್ ನಾಯ್ಕ
ಹರಪನಹಳ್ಳಿ, ಆ.28- ಪಠ್ಯ ಅಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದಾಗ ಮಾತ್ರ ಸೃಜನಶೀಲರಾಗಲು ಸಾಧ್ಯವಾಗುತ್ತದೆ ಎಂದು ಶ್ರೀ ವೆಂಕಟೇಶ್ವರ ಪ್ರೌಢಶಾಲೆಯ ಕಾರ್ಯಾಧ್ಯಕ್ಷ ವೈ.ಕಾಶಿನಾಥ ಹೇಳಿದರು
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಗ್ರಾಮ ಪಂಚಾಯತಿ ಗುಂಡಗತ್ತಿ ಶ್ರೀವೆಂಕಟೇಶ್ವರ ಪ್ರೌಢಶಾಲೆ ಪುಣಭಗಟ್ಟ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ತೆಲಗಿ ವಲಯ ಮಟ್ಟದ ಕ್ರೀಡಾ ಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಮಕ್ಕಳ ಪ್ರತಿಭೆ ಗುರುತಿಸಲು ಶಾಲಾ ಹಂತದ ಕ್ರೀಡಾಕೂಟಗಳು ಸಹಕಾರಿಯಾಗಿದ್ದು, ಇದರಿಂದ ವಿದ್ಯಾರ್ಥಿಗಳ ನಡುವೆ ಸೋದರ ಸಂಬಂಧ ಬೆಳೆಯಲಿವೆ ಎಂದರು.
ತಾಲೂಕು ದೈಹಿಕ ಪರಿವೀಕ್ಷಕ ಷಣ್ಮುಖಪ್ಪ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಸಹಜ, ವಿದ್ಯಾರ್ಥಿಗಳು ಗ್ರಾಮೀಣ ಕ್ರೀಡೆಯಿಂದ ಉನ್ನತ ಮಟ್ಟಕ್ಕೆ ಹೋಗುವ ಮೂಲಕ ಉತ್ತಮ ಕ್ರೀಡಾ ಪಟುಗಳಾಗಿ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಎಂ.ರಾಜಶೇಖರ್, ಕ್ರೀಡಾ ಧ್ವಜಾರೋಹಣ ನೆರವೇರಿಸಿದರು, ವಕೀಲ ಮಂಜುನಾಥ್ ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀವೆಂಕಟೇಶ್ವರ ಪ್ರೌಢ ಶಾಲೆಯ ಅಧ್ಯಕ್ಷೆ ಉಷಾ ಕಾಶಿನಾಥ್ ನಾಯ್ಕ , ಗುಂಡಗತ್ತಿ ಬಂದೋಳ್ ಮಂಜಣ್ಣ, ಮುಖ್ಯ ಶಿಕ್ಷಕ ಹೆಚ್.ಎನ್.ನಾಗರಾಜ್, ತಲುವಾಗಲು ರುದ್ರಪ್ಪ, ಹನುಮಂತಪ್ಪ, ಗ್ರಾ.ಪಂ. ಅಧ್ಯಕ್ಷೆ ವಿಜಯಲಕ್ಷ್ಮಿ, ಉಪಾಧ್ಯಕ್ಷ ಹನುಮಂತಪ್ಪ, ನೇತ್ರಾವತಿ, ನಾಗಣ್ಣ, ಮಂಜಮ್ಮ ನಾಗರಾಜ, ಬಿ.ಕೆ.ಮಂಜಪ್ಪ, ಹೇಮಂತಪ್ಪ, ರಾಜಪ್ಪ, ಕರಿಯಪ್ಪ, ಕೆ.ಪ್ರಕಾಶ್, ಕೆ.ಗಂಗಣ್ಣ, ಕೌಶಿಕ್, ಎಸ್.ದೇವಿಂದ್ರಪ್ಪ, ಕೆ. ಚಂದ್ರಪ್ಪ, ಬಿ.ಹೆಚ್.ಹನುಮಂತಪ್ಪ, ತಿರುಪತಿ ನಾಯ್ಕ, ಸೂರ್ಯನಾಯ್ಕ, ಮೋಟ್ಲಾನಾಯ್ಕ, ಹನುಮಂತಪ್ಪ, ಮಹಾದೇವಕ್ಕ. ಲಕ್ಯನಾಯ್ಕ, ನಾಗೇಶ್, ಕೆಂಚಪ್ಪ, ಶಿವಶಂಕರ್, ಮೋಹನ್, ನಿಂಗರಾಜ್ ಸೇರಿದಂತೆ ಇತರರು ಇದ್ದರು.