ಹೊನ್ನಾಳಿ, ಆ.20- ತಾಲ್ಲೂಕಿನ ಅರಕೆರೆ, ಕೋಟೆ ಮಲ್ಲೂರು, ಬೇಲಿಮಲ್ಲೂರು, ಹಿರೇಗೋಣಿಗೆರೆ, ಹೊನ್ನೂರು, ವಡ್ಡರಹಟ್ಟಿ ಸುತ್ತ ಮುತ್ತಲಿನ ಗ್ರಾಮದ ರೈತರಿಗೆ, ಸಾಕು ಪ್ರಾಣಿಗಳಿಗೆ ಹಾಗೂ ಸಾರ್ವ ಜನಿಕರಲ್ಲಿ ಭಯದ ವಾತಾವರಣ ಮೂಡಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಇಂದು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಇದನ್ನು ಗಮನಿಸಿದ ಹಾಗೂ ವಿಷಯ ತಿಳಿದ ಸ್ಥಳೀಯ ನಿವಾಸಿಗಳು ಭಯದಿಂದ ಹೊರಬಂದು ನಿರಾಳ ವಾತಾವರಣ ಕಂಡು ಬಂದಿದೆ.
December 29, 2024