ಜುಲೈನಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.85ರಷ್ಟು ಹೆಚ್ಚು ಮಳೆ

ಜುಲೈನಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.85ರಷ್ಟು ಹೆಚ್ಚು ಮಳೆ

ದಾವಣಗೆರೆ, ಆ. 1 – ದಾವಣಗೆರೆ ಜಿಲ್ಲೆಯಲ್ಲಿ ಜುಲೈನಲ್ಲಿ ವಾಡಿಕೆಗಿಂತ ಶೇ.85ರಷ್ಟು ಹೆಚ್ಚು ಧಾರಾಕಾರ ಮಳೆ ಸುರಿದಿದೆ. ಹೊನ್ನಾಳಿ ತಾಲ್ಲೂಕಿನಲ್ಲಿ ವಾಡಿಕೆಗಿಂತ ಅತಿ ಹೆಚ್ಚಿನ ಶೇ.152ರಷ್ಟು ಮಳೆಯಾಗಿದೆ.

ಜೂನ್ ತಿಂಗಳಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.4ರಷ್ಟು ಕಡಿಮೆ ಮಳೆಯಾಗಿತ್ತು. ಅದರಲ್ಲೂ ಚನ್ನಗಿರಿ ತಾಲ್ಲೂಕಿನಲ್ಲಿ ವಾಡಿಕೆಗಿಂತ ಶೇ.32 ಹಾಗೂ ನ್ಯಾಮತಿಯಲ್ಲಿ ಶೇ.46ರಷ್ಟು ಕಡಿಮೆ ಮಳೆಯಾಗಿತ್ತು.

ಜುಲೈ ತಿಂಗಳಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಜುಲೈನಲ್ಲಿ ಜಿಲ್ಲೆಯ ವಾಡಿಕೆ ಮಳೆ ಪ್ರಮಾಣ 108 ಮಿ.ಮೀ. ಆಗಿದ್ದರೆ, ವಾಸ್ತವಿಕವಾಗಿ 199 ಮಿ.ಮೀ. ಮಳೆ ಸುರಿದಿದೆ. ಒಟ್ಟಾರೆ ಮಳೆಯ ಪ್ರಮಾಣ ಶೇ.85ರಷ್ಟು ಹೆಚ್ಚಾಗಿದೆ.

ಜುಲೈ ತಿಂಗಳಲ್ಲಿ ಚನ್ನಗಿರಿಯಲ್ಲಿ ವಾಡಿಕೆಗಿಂತ ಶೇ.33ರಷ್ಟು ಹೆಚ್ಚಿನ ಮಳೆಯಾಗಿದೆ. ದಾವಣಗೆರೆಯಲ್ಲಿ ಶೇ.114, ಹರಿಹರದಲ್ಲಿ ಶೇ.133, ಹೊನ್ನಾಳಿಯಲ್ಲಿ ಶೇ.152, ಜಗಳೂರಿನಲ್ಲಿ ಶೇ.47 ಹಾಗೂ ನ್ಯಾಮತಿಯಲ್ಲಿ ಶೇ.95ರಷ್ಟು ಹೆಚ್ಚು ಮಳೆಯಾಗಿದೆ.

ಮಳೆಗಾಲದ ಅವಧಿಯ ಮೊದಲ ಎರಡು ತಿಂಗಳಲ್ಲಿ ಜಿಲ್ಲೆಯ ವಾಡಿಕೆ ಮಳೆ ಪ್ರಮಾಣ 295 ಮಿ.ಮೀ ಆಗಿದ್ದರೆ, ಇದುವರೆಗೂ 422 ಮಿ.ಮೀ. ಮಳೆ ಸುರಿದಿದೆ. ಒಟ್ಟಾರೆ ಮಳೆಯಲ್ಲಿ ಶೇ.42ರಷ್ಟು ಹೆಚ್ಚಳವಾಗಿದೆ.

error: Content is protected !!