ಕು. ಸೌಭಾಗ್ಯ ಬೀಳಗಿಮಠ ಅವರಿಗೆ `ಸಾಧನೆಯ ಶಿಖರ’ ಬಿರುದು ಪ್ರದಾನ
ಶ್ರೀ ಅಭಿನವ ರೇಣುಕ ಮಂದಿರದಲ್ಲಿ ನಡೆಯುತ್ತಿರುವ ರಂಭಾಪುರಿ ಪೀಠದ ಶ್ರೀಮದ್ ರಂಭಾಪುರಿ ಜಗದ್ಗುರುಗಳವರ 26ನೇ ವರ್ಷದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮೋತ್ತೇಜಕ ಕಾರ್ಯಕ್ರಮದಲ್ಲಿ ಇಂದಿನ ಸಮಾರಂಭದ ವಿವರ.
ಸಂಜೆ 6.30ಕ್ಕೆ ಏರ್ಪಾಡಾಗಿ ರುವ ಧರ್ಮೋತ್ತೇಜಕ ಸಮಾರಂಭದ ನೇತೃತ್ವವನ್ನು ಶ್ರೀ ವಿಮಲ ರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು, (ಮುಕ್ತಿಮಂದಿರ ಕ್ಷೇತ್ರ ಹಾಗೂ ಅಧ್ಯಕ್ಷರು, ಅ.ಭಾ.ವೀ.ಶಿ.ಸಂಸ್ಥೆ (ರಿ.), ಬೆಂಗಳೂರು) ವಹಿಸುವರು. ಹಂಪಸಾಗರದ ನವಲಿ ಹಿರೇ ಮಠದ ಶ್ರೀ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡುವರು.
ಇದೇ ಸಂದರ್ಭದಲ್ಲಿ ಯುಪಿಎಸ್ಸಿಯಲ್ಲಿ 101ನೇ ರಾಂಕ್ ಪಡೆದ ವಿದ್ಯಾರ್ಥಿನಿ ಕು. ಸೌಭಾಗ್ಯ ಬೀಳಗಿಮಠ ಅವರಿಗೆ `ಸಾಧನೆಯ ಶಿಖರ’ ಬಿರುದಿನೊಂದಿಗೆ ಗೌರವ ಶ್ರೀರಕ್ಷೆ, ಪ್ರಶಸ್ತಿ ಪ್ರದಾನ ಮಾಡ ಲಾಗುವುದು. ಬಿಜೆಪಿ ಮುಖಂಡರಾದ ಶ್ರೀಮತಿ ಗಾಯತ್ರಿ ಸಿದ್ದೇಶ್ವರ್, ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್, ಉಪ ಮಹಾಪೌರರಾದ ಶ್ರೀಮತಿ ಯಶೋಧ ಯಗ್ಗಪ್ಪ, ಬಿಜೆಪಿ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷರಾದ ಶ್ರೀಮತಿ ಹೆಚ್.ಸಿ. ಜಯಮ್ಮ, ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.