ದಾವಣಗೆರೆ, ಜು. 26- ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಪಂ.ಪಂಚಾಕ್ಷರಿ ಗವಾಯಿಗಳ ಪುಣ್ಯ ಸ್ಮರಣೆ `ಗುರು ಗುಣಗಾನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸೌಮ್ಯ ಸತೀಶ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಂಚಾಕ್ಷರಿ ಗವಾಯಿಗಳ ಬಗ್ಗೆ ತಿಳಿಸಿ, ನಮಗೆ ಗುರು ಏಕೆ ಮತ್ತು ಹೇಗೆ ಮುಖ್ಯ ಅಂತ ಹೇಳಿದರು.
ಸದಸ್ಯರಿಗೆ ವಚನ ಜೋಡಣೆಯ ಸ್ಪರ್ಧೆಯಲ್ಲಿ ಲತಾ ಕಪ್ಪಾಳಿ ಬಹುಮಾನ ಪಡೆದರು. ಮಮತಾ ನಾಗರಾಜ್ ಗುರುವಿನ ಘನತೆ ಮತ್ತು ಮಹಿಮೆ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಂತ ಶಿವಶಂಕರ್, ರತ್ನ ಕಾಟ್ವೆ, ನಿರ್ಮಲಾ, ಗೀತಾ, ಸುಧಾ, ದೀಪ ಕಿರಣ್, ರಾಜಶ್ರೀ, ರತ್ನ, ಸೀಮಾ, ಸುಮಾ ಕೊಟ್ರೇಶ್, ಮಧುಮತಿ, ತನುಜಾ ಮತ್ತಿತರರು ಉಪಸ್ಥಿತರಿದ್ದರು.