ದಾವಣಗೆರೆ, ಜು. 26 – ಎಸ್.ಎಸ್.ಕೆ. ಸಮಾಜದ ಹಿರಿಯರೂ, ರಾಜ್ಯಸಭೆಯ ನೂತನ ಸದಸ್ಯರೂ ಆದ ನಾರಾಯಣಸಾ ಬಾಂಡಗೆ ಅವರು ಬಾಗಲಕೋಟೆ ನಗರಕ್ಕೆ ಇಂದು ಭೇಟಿ ನೀಡಿದ್ದ ಸಂದರ್ಭದಲ್ಲಿ ದಾವಣಗೆರೆಯ ಎಸ್.ಎಸ್.ಕೆ. ಸಮಾಜದ ವತಿಯಿಂದ ಅಧ್ಯಕ್ಷ ಮಲ್ಲಾರಸಾ ಆರ್. ಕಾಟ್ವೆ ಅವರ ನೇತೃತ್ವದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ಈ ಸಂದರ್ಭದಲ್ಲಿ ಎಸ್.ಎಸ್.ಕೆ. ಸಮಾಜದ ಕಾರ್ಯದರ್ಶಿ ಮಹೇಶ್ ಸೋಳಂಕಿ, ಮುಖಂಡರುಗಳಾದ ಅಶೋಕ ರಾಯಬಾಗಿ, ನಾಗನಾಥ್ ಬಿ. ಕಾಶಿಗಾವ್, ಗಜಾನನ ಭೂತೆ ಮತ್ತಿತರರು ಉಪಸ್ಥಿತರಿದ್ದರು.
January 9, 2025