ಮಲೇಬೆನ್ನೂರು : ಡೆಂಗ್ಯೂ ಜಾಗೃತಿ ಜಾಥಾದಲ್ಲಿ ಮುಖ್ಯಾಧಿಕಾರಿ ಭಜಕ್ಕನವರ್
ಮಲೇಬೆನ್ನೂರು, ಜು. 26 – ಇಲ್ಲಿನ ಪುರಸಭೆ ಮತ್ತು ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಕಾಯಿಲೆಗಳ ಹರಡುವಿಕೆ ಹಾಗೂ ಅದನ್ನು ತಡೆಗಟ್ಟುವಿಕೆ ಕುರಿತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೋಮವಾರ ಜಾಗೃತಿ ಜಾಥಾ ನಡೆಸಲಾಯಿತು.
ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಭಜಕ್ಕನವರ್, ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಹಾಗೂ ರೋಗಗಳು ಹರಡುವ ರೀತಿಯ ಬಗ್ಗೆ ಮಾಹಿತಿ ನೀಡಿದರು.
ನಾವು ನಮ್ಮ ಪರಿಸರ ಸ್ವಚ್ಛವಾಗಿಟ್ಟುಕೊಂಡು ಸೊಳ್ಳೆಗಳು ಉತ್ಪತ್ತಿ ಆಗದ ರೀತಿ ನೋಡಿಕೊಂಡು ತ್ಯಾಜ್ಯ ವಸ್ತುಗಳನ್ನು ಕಚ್ಚಾ ಹಾಗೂ ಒಣಗಿದ ಕಸವಾಗಿ ಬೇರ್ಪಡಿಸಿ ಸಂಸ್ಕರಣೆ ಮಾಡುವುದರಿಂದ ಸೊಳ್ಳೆಗಳ ಉತ್ಪತ್ತಿ ಕಡಿಮೆಯಾಗಿ ರೋಗಗಳು ಕೂಡ ಕಡಿಮೆ ಆಗುತ್ತವೆ. ಇದೊಂದು ನಾವು ಸ್ವಯಂ ಪ್ರೇರಿತವಾಗಿ ಸಮಾಜಕ್ಕೆ ನೀಡುವ ಸಣ್ಣ ಕೊಡುಗೆಯಾಗಿದೆ ಎಂದು ಹೇಳಿದರು.
ಜಾಥಾದಲ್ಲಿ ಪುರಸಭೆ ಸದಸ್ಯರಾದ ಸಾಬೀರ್ ಅಲಿ, ಬಸವರಾಜ್ ದೊಡ್ಮನಿ, ಕೆ.ಪಿ. ಗಂಗಾಧರ್, ಭಾನುವಳ್ಳಿ ಸುರೇಶ್, ವೈದ್ಯಾಧಿಕಾರಿ ಲಕ್ಷ್ಮಿದೇವಿ, ಪುರಸಭೆಯ ಆರೋಗ್ಯ ನಿರೀಕ್ಷಕರಾದ ಶಿವರಾಜ್, ಅವಿನಾಶ್, ತಿಮ್ಮೇಗೌಡ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಕಿರಣ್, ರವೀಂದ್ರ ಮತ್ತು ಇತರರು ಭಾಗವಹಿಸಿದ್ದರು.