ಹೊನ್ನಾಳಿ, ಜು. 26 – ತಾಲ್ಲೂಕಿನ ಹನುಮಸಾಗರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ನಾಗರಾಜ್ ನಾಯ್ಕ್ ಅವಿರೋಧವಾಗಿ ಆಯ್ಕೆಯಾಗಿರುವು ದಾಗಿ ಚುನಾವಣಾಧಿಕಾರಿಯಾಗಿದ್ದ ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಡಿ.ಎಂ. ಷಣ್ಮುಖ ತಿಳಿಸಿದ್ದಾರೆ.
ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರುತಿ ಮಂಜುನಾಥ್, ಸದಸ್ಯರಾದ ಬಸಮ್ಮ, ಮಂಜಮ್ಮ, ರಂಜಿತ್, ಚಂದ್ರಪ್ಪ, ಭಾರತಿ ಬಾಯಿ, ಹನುಮಂತಪ್ಪ, ಜಿನದತ್ತ, ಮಹಮ್ಮದ್ ರಫಿ, ಮಂಜಪ್ಪ, ಸುಭಾಷ್, ಸತ್ತಿಬಾಯಿ ಗ್ರಾಮದ ಮುಖಂಡರಾದ ಬಳ್ಳೇಶ್ವರ ಷಣ್ಮುಖಪ್ಪ, ಕೊನಾಯ್ಕನಹಳ್ಳಿ ಮಂಜುನಾಥ್, ಜುಂಜಾ ನಾಯ್ಕ, ಬಿಜೆಪಿ ಮಂಡಲದ ಅಧ್ಯಕ್ಷ ಜೆ.ಕೆ. ಸುರೇಶ್, ಪೇಟೆ ಪ್ರಶಾಂತ್ ಪಿಡಿಒ ಶಿವಕುಮಾರ್, ಕಾರ್ಯದರ್ಶಿ ಮಂಜುನಾಥ್, ಸಿಬ್ಬಂದಿಗಳಾದ ಬಸವರಾಜ್, ಈಶ್ವರಪ್ಪ ಮತ್ತಿತತರು ಉಪಸ್ಥಿತರಿದ್ದರು.