ದಾವಣಗೆರೆ, ಜು. 26 – ನಗರದ ಲಯನ್ಸ್ ಕ್ಲಬ್ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ಸಂಭ್ರಮಾಚರಣೆಯನ್ನು ಲಯನ್ಸ್ ಭವನದಲ್ಲಿ ಇಂದು ಆಚರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಿ. ಉಳವಯ್ಯ ಅವರು ಮಾತನಾಡಿ, ಕಾರ್ಗಿಲ್ ಯುದ್ದದಲ್ಲಿ ಹೋರಾಡಿ ವಿಜಯ ಪತಾಕೆಯನ್ನು ಹಾರಿಸಿದ ಭಾರತೀಯ ಯೋಧರ ತ್ಯಾಗವನ್ನು ಸ್ಮರಿಸಿದರು.
ಬಾಪೂಜಿ ವೈದ್ಯಕೀಯ ಕಾಲೇಜಿನ ಉಪನ್ಯಾಸಕ ಡಾ. ಇಮ್ರಾನ್‌ವುಲ್ಲಾ, ಲಯನ್ಸ್ ಪ್ರಾಂತೀಯ ಅಧ್ಯಕ್ಷ ವೈ.ಬಿ. ಸತೀಶ್, ಲಯನ್ಸ್ ಜಿಎಂಟಿ ಕೋ-ಆರ್ಡಿ ನೇಟರ್ ಬೆಳ್ಳೂಡಿ ಶಿವಕುಮಾರ್, ಜಿಲ್ಲಾ ಲಯನ್ಸ್ ಛೇರ್ಮನ್ ಆರ್.ಜಿ. ಶ್ರೀನಿವಾಸ್ ಮೂರ್ತಿ, ಎನ್.ವಿ. ಬಂಡಿವಾಡ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಹಿರಿಯ ಶಿಕ್ಷಕರೂ ಆಗಿರುವ ಲಯನ್ಸ್ ಕಾರ್ಯದರ್ಶಿ ಸಿ. ಅಜಯ್ ನಾರಾಯಣ್ ಅವರು ಯೋಧರ ತ್ಯಾಗ ಬಲಿದಾನವನ್ನು ಸ್ಮರಿಸಿದರು.
ಲಯನ್ಸ್ ಖಜಾಂಚಿ ಎಸ್. ನಾಗರಾಜ್, ಲಯನ್ಸ್ ನಿರ್ದೇಶಕರುಗಳಾದ ಭೀಮಾನಂದ್ ಶೆಟ್ಟಿ, ಹೇಮಣ್ಣ, ಬಸವರಾಜಪ್ಪ, ರತನ್, ಟಿ. ಶರಣಪ್ಪ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಾಸುದೇವ ರಾಯ್ಕರ್ ಕಾರ್ಯಕ್ರಮ ನಿರೂಪಿಸಿ ದರು. ಸಹ ಕಾರ್ಯದರ್ಶಿ ಎಚ್. ಎಂ. ನಾಗರಾಜ್ ವಂದಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳು ಯೋಧರ ಉಡುಪು ಧರಿಸಿ ಸಮಾರಂಭಕ್ಕೆ ಕಳೆ ತಂದರು.