ದಾವಣಗೆರೆ, ಜು. 24 – ಬಿಳಿಬಣ್ಣವೆಂದರೆ ಶಾಂತಿಯ ಸಂಕೇತ, ಪರಿಶುದ್ಧತೆಯ ಪ್ರತೀಕವೆಂಬಂತೆ ನಗರದ ಶ್ರೀ ವಾಸವಿ ರಾಷ್ಟ್ರೀಯ ವಿದ್ಯಾಲಯದಲ್ಲಿ ನರ್ಸರಿ ವಿಭಾಗದ ಮಕ್ಕಳು ಬಿಳಿಯ ಬಣ್ಣದ ವಸ್ತ್ರವನ್ನು ಧರಿಸಿ `ಮಿಲ್ಕ್ ಡೇ’ ಆಚರಿಸಿದರು. ವಿದ್ಯಾಸಂಸ್ಥೆಯ ಪ್ರಾಂಶುಪಾಲ ರಾದ ಶ್ರೀಮತಿ ಬಿ. ರಶ್ಮಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆ ಅಧ್ಯಕ್ಷ ಹೆಚ್.ಅನಿಲ್ ಕುಮಾರ್, ಕಾರ್ಯದರ್ಶಿ ಉಮಾಪತಯ್ಯ ಹಾಗೂ ಖಜಾಂಚಿ ಪ್ರವೀಣ್ ಹುಲ್ಲುಮನೆ, ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.