ಮಲೇಬೆನ್ನೂರು, ಜು. 24- ಕುಂಬಳೂರು ಗ್ರಾಮದಲ್ಲಿ ಮಂಜಮ್ಮ ಎಂಬುವವರಿಗೆ ಡೆಂಗ್ಯೂ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಅವರ ಮನೆಗೆ ಭೇಟಿ ನೀಡಿ, ಅಲ್ಲಿನ ಜನರಿಗೆ ಡೆಂಗ್ಯೂ ರೋಗದ ಕುರಿತು ಟಿಹೆಚ್ಓ ಡಾ. ಅಬ್ದುಲ್ ಖಾದರ್ ಅವರು ಮಾಹಿತಿ ನೀಡಿದರು. ನಂತರ ಗ್ರಾಮದಲ್ಲಿ ಲಾರ್ವಾ ಸಮೀಕ್ಷೆ ಮಾಡಿ, ಜನರಿಗೆ ಡೆಂಗ್ಯೂ ಕುರಿತು ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ತಾ. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ. ಉಮ್ಮಣ್ಣ ಮತ್ತು ಇತರರು ಹಾಜರಿದ್ದರು.
February 4, 2025