ಹಿರಿಯ ಸನ್ನದು ಲೆಕ್ಕ ಪರಿಶೋಧಕ ಎನ್.ಜಿ. ಗಿರೀಶ್ ನಾಡಿಗ್ ಅಭಿಮತ
ದಾವಣಗೆರೆ, ಜು.24- ನಿತ್ಯವು ಗುರು ಭಜನೆಯಲ್ಲಿ ತೊಡಗಿದರೆ ಮನಸ್ಸು ಸ್ಥಿರತೆಗೊಂಡು ಶಾಂತ ಸ್ವಭಾವ ಮರಳಲಿದೆ ಎಂದು ಹಿರಿಯ ಸನ್ನದು ಲೆಕ್ಕ ಪರಿಶೋಧಕ ಎನ್.ಜಿ. ಗಿರೀಶ್ ನಾಡಿಗ್ ಅಭಿಪ್ರಾಯಪಟ್ಟರು.
ನಗರದ ಆದರ್ಶ ಯೋಗ ಪ್ರತಿಷ್ಠಾನದ ಮಹಮ್ಮಾಯಿ ವಿಶ್ವಯೋಗ ಮಂದಿರದಲ್ಲಿ ಆಯೋಜಿಸಿದ್ದ ಗುರು ಪೂರ್ಣಿಮೆ ಪೂಜಾ ಮಹೋತ್ಸವ ಹಾಗೂ ಸದ್ಗುರು ಪತಂಜಲಿ ಮಹಾಮಂಟಪ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸದೃಢ ದೇಹ ಹೊಂದಿದ್ದರೂ ಮನಸ್ಸು ಶಾಂತವಾಗಿರದಿದ್ದಲ್ಲಿ ಆರೋಗ್ಯದಲ್ಲಿ ಏರುಪೇರಾಗುವುದು ಸತ್ಯ. ಆದ್ದರಿಂದ ಮಾನಸಿಕ ನೆಮ್ಮದಿ ಹಾಗೂ ಶಾಂತಿ ಪಡೆಯಲು ಸಮರ್ಪಣಾಭಾವದಿಂದ ಗುರುಸ್ಮರಣೆ ಮಾಡಬೇಕು ಎಂದು ಹೇಳಿದರು.
ಸನಾತನ ಧರ್ಮದ ಆಚರಣೆಯಿಂದ ಸರ್ವ ಸಮಾಜದ ಹಿತ ಕಾಣಬಹುದಾಗಿದ್ದು, ಸನಾತನ ಮತ್ತು ಪುರಾತನವನ್ನು ಅರ್ಥೈಸಿಕೊಂಡು ಬಾಳುವ ಜತೆಗೆ ಸಂಸ್ಕೃತಿ ಸಂಸ್ಕಾರವನ್ನು ತಪ್ಪದೇ ಪಾಲಿಸುವಂತೆ ಕಿವಿ ಮಾತು ಹೇಳಿದರು.
ಇದೇ ಸಂದರ್ಭದಲ್ಲಿ ನೂತನ ಶ್ರೀ ಸದ್ಗುರು ಪತಂಜಲಿ ಮಹಾಮಂಟಪ ಲೋಕಾರ್ಪಣೆ ಮಾಡಲಾಯಿತು. ಕರಕುಶಲಕರ್ಮಿ ಚಂದ್ರಶೇಖರ್ ಅವರಿಗೆ ಪ್ರತಿಷ್ಠಾನದ ವತಿಯಿಂದ ಗೌರವಿಸಿ, ಸನ್ಮಾನಿಸಲಾಯಿತು.
ಪ್ರತಿಷ್ಠಾನದ ಯೋಗ ಗುರು ರಾಘವೇಂದ್ರ ಗುರೂಜಿಯವರ ಮಾರ್ಗದರ್ಶನದಲ್ಲಿ ಅಗ್ನಿ ಹೋತ್ರ ಹೋಮವನ್ನು ಎಸ್.ಎ. ಧನಂಜಯ ಮತ್ತು ಸಹನಾ ಧನಂಜಯ ದಂಪತಿ ಮುಖೇನ ಮಾಡಿಸಿದರು.
ಹರಿಹರದ ಉದ್ಯಮಿ ಆಶಾ ಪ್ರದೀಪ್ ಗುರುಭಜನೆ, ಸಂಗೀತ ಸುಧೆ ಕಾರ್ಯಕ್ರಮವನ್ನು ಸುಶ್ರಾವ್ಯವಾಗಿ ನಡೆಸಿಕೊಟ್ಟರು.
ಹಣಕಾಸು ಸಲಹೆಗಾರ ಹೆಚ್. ಮಂಜುನಾಥ್, ಅಂತರವಳ್ಳಿ ಮುರಳೀಧರ ಆಚಾರ್, ಹಿರಿಯ ಯೋಗ ಶಿಕ್ಷಕ ಲಲಿತ್ ಕುಮಾರ್ ವಿ. ಜೈನ್, ಸಂಗೀತ ಸತೀಶ್ ಮಾಲ್ಪಾನಿ, ಮಂಗಳಗೌರಿ, ಸಂದೀಪ್ ವಾದೋನಿ, ಎಚ್. ಸಂತೋಷ್, ಶಾಂತಮ್ಮ, ರೇಖಾ ಕಲ್ಲೇಶ್, ಭರತ್ ವದೋನಿ, ಜ್ಯೋತಿ ವಾಸುದೇವ್
ಆದರ್ಶ ಯೋಗ ಪ್ರತಿಷ್ಠಾನ, ಮಹಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದ ವತಿಯಿಂದ ಕಾರ್ಯಕ್ರಮ ನಡೆಯಿತು.